ನೇಪಾಳ: ಬಸ್ ಅಪಘಾತ-43 ಮಂದಿ ಸಾವು

7

ನೇಪಾಳ: ಬಸ್ ಅಪಘಾತ-43 ಮಂದಿ ಸಾವು

Published:
Updated:

ಕಠ್ಮಂಡು (ಪಿಟಿಐ): ಪೂರ್ವ ನೇಪಾಳದಲ್ಲಿ ಪ್ರಯಾಣಿಕರು ತುಂಬಿದ್ದ ಬಸ್ಸೊಂದು ಬೆಟ್ಟವೊಂದರ ರಸ್ತೆಯಿಂದ ಜಾರಿ ಸುಕೋಶಿ ನದಿಯಲ್ಲಿ ಬಿದ್ದಿದ್ದು ಕನಿಷ್ಠ 43 ಮಂದಿ ಮೃತಪಟ್ಟಿದ್ದಾರೆ.

ಇಲ್ಲಿಂದ 150 ಕಿ.ಮೀ. ಪೂರ್ವದ ಸಿಂಧೂಲಿ ಜಿಲ್ಲೆಯ ಜಂಗಜ್‌ಹೋಲಿ ಗ್ರಾಮದ ರಿತೆಭಿರ್ ಪ್ರದೇಶದಲ್ಲಿರುವ ನದಿಯಲ್ಲಿ ಬಸ್ ಮುಳುಗಿದ್ದು 43 ಮಂದಿ ಮೃತಪಟ್ಟು ಇತರ 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌ನ ಮೇಲೆ ಪ್ರಯಾಣಿಸುತ್ತಿದ್ದ 11 ಮಂದಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ರಾಜಧಾನಿಗೆ ಹೋಗುತ್ತಿತ್ತು.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕಠ್ಮಂಡುಗೆ ಕರೆತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯದಶಮಿ ನಂತರ ನೇಪಾಳದಲ್ಲಿ ಸಂಭವಿಸಿದ ಬಹು ದೊಡ್ಡ ಬಸ್ ಅಪಘಾತ ಇದಾಗಿದೆ.  ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಬಸ್‌ನಲ್ಲಿ ಮಿತಿಮೀರಿದ ಮಂದಿ ಇದ್ದುದರಿಂದ ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry