ಸೋಮವಾರ, ಜೂನ್ 14, 2021
27 °C

ನೇಪಾಳ ಭೇಟಿ: ಪ್ರಧಾನಿಯ ಕೊನೆಯ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನೇಪಾಳ ಪ್ರಧಾನಿ ಸುಶೀಲ್‌ ಕೊಯಿರಾಲ ಆಹ್ವಾನದ ಮೇರೆಗೆ ಪ್ರಧಾನಿ ಮನಮೋಹನ್‌ ಸಿಂಗ್ ಶೀಘ್ರ ಆ ದೇಶಕ್ಕೆ ಭೇಟಿ ನೀಡಲಿದ್ದಾರೆ.ಹತ್ತು ವರ್ಷ ಪ್ರಧಾನಿಯಾಗಿ ಅಧಿ­ಕಾರ ನಡೆಸಿರುವ ಸಿಂಗ್‌ ಇತ್ತೀಚೆಗೆ ಬಿಮ್ ಸ್ಟೆಕ್ ಶೃಂಗಸಭೆ­ಯಲ್ಲಿ ಭಾಗ­ವಹಿಸಲು ಮ್ಯಾನ್ಮಾರ್‌ಗೆ ತೆರಳಿದ್ದಾಗ ಕೊಯಿ­ರಾಲ ನೇಪಾಳಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು.ಪ್ರಧಾನಿ ಪ್ರವಾಸದ ಪೂರ್ವ ನಿಗದಿತ ವೇಳಾಪಟ್ಟಿಯಂತೆ ಮ್ಯಾನ್ಮಾರ್‌ ಭೇಟಿಯೇ ಸಿಂಗ್‌ ಅವರ ಕೊನೆಯ ಪ್ರವಾಸವಾಗಬೇಕಿತ್ತು. ಆದರೆ, ನೇಪಾಳ ಆಹ್ವಾನದ ಮೇರೆಗೆ ಸಿಂಗ್ ಅಲ್ಲಿಗೆ ಭೇಟಿ ನೀಡಲು ಬಯಸಿದ್ದಾರೆ. ಸಿಂಗ್  ತಮ್ಮ ಅಧಿಕಾ­ರಾವಧಿಯಲ್ಲಿ ನೇಪಾಳ ಮತ್ತು ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.