ಶುಕ್ರವಾರ, ಜೂನ್ 25, 2021
29 °C

ನೇಮಕಾತಿಗೆ ಇನ್ನೆಷ್ಟು ಸಮಯಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿವಿಧ ಹುದ್ದೆಗಳಿಗೆ 2011 ಜುಲೈನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನೇಮಕಾತಿ ಪರೀಕ್ಷೆ ನಡೆಸಿತ್ತು.ಆರು ತಿಂಗಳ ನಂತರ ಡಿಸೆಂಬರ್ 15 ರಂದು ಮೊದಲನೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಿದೆ. ಎರಡು ತಿಂಗಳಾದರೂ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ.ನೇಮಕಾತಿ ಅಧಿಸೂಚನೆ ಹೊರಡಿಸಿ ಒಂದು ವರ್ಷ ಮುಗಿದು ಹೋಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಇದ್ದ ಖಾಸಗಿ ಶಾಲೆಗಳ ಕೆಲಸ ಬಿಟ್ಟು ನೇಮಕಾತಿ ಆದೇಶಕ್ಕೆ ಕಾದು ಕುಳಿತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕೆ.ಆರ್.ಇ.ಐ.ಎಸ್.) ಹಲವು ಟೆಲಿಪೋನ್ ನಂಬರ್‌ಗಳನ್ನು ನೀಡಿದೆ. ಆದರೆ ಈ ನಂಬರುಗಳಿಗೆ ಕರೆ ಮಾಡಿದರೆ ಸರಿಯಾದ ಮಾಹಿತಿ ನೀಡದೆ ವೆಬ್‌ಸೈಟ್ ನೋಡುತ್ತಿರಿ, ಪೇಪರ್ ನೋಡುತ್ತಿರಿ, ಇನ್ನೂ ತಿಂಗಳಾಗಬಹುದು ಎಂಬ ಉತ್ತರಗಳನ್ನು ಹೇಳುತ್ತಿದ್ದಾರೆ.

 

ನೇಮಕಾತಿಗೆ ನ್ಯಾಯಾಲಯದ ತಡೆ ನೀಡಿದೆ ಎಂಬ ವದಂತಿಗಳು ಕೇಳಿ ಬರುತ್ತವೆ. ಅನೇಕರಿಗೆ ಬೇರೆಡೆ ಕೆಲಸಕ್ಕೆ ಹೋಗಲು ಅವಕಾಶಗಳಿಲ್ಲ. ಆದೇಶ ಯಾವಾಗ ಹೊರಬೀಳಬಹುದು ಎಂಬ ಮಾಹಿತಿಯನ್ನಾದರೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನೀಡಬಹುದೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.