ನೇಮಕಾತಿ ಅಕ್ರಮ ಆರೋಪ: ಶಶಿ ತರೂರ್ ಸ್ಪಷ್ಟನೆ

ಬುಧವಾರ, ಜೂಲೈ 17, 2019
29 °C

ನೇಮಕಾತಿ ಅಕ್ರಮ ಆರೋಪ: ಶಶಿ ತರೂರ್ ಸ್ಪಷ್ಟನೆ

Published:
Updated:

ತಿರುವನಂತಪುರ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟದ ಯುವ ಕ್ರೀಡೆಗಳ ಸಂಘಟನಾ ಸಮಿತಿಯ ಅಂತರರಾಷ್ಟ್ರೀಯ ಸಲಹೆಗಾರರಾಗಿ ತಮ್ಮನ್ನು ಮಾಡಿದ್ದ ನೇಮಕದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಸ್ಪಷ್ಟಪಡಿಸಿದ್ದಾರೆ.ಈ ನೇಮಕ ತಾವು ಸಾರ್ವಜನಿಕ ಜೀವನಕ್ಕೆ ಬರುವುದಕ್ಕಿಂತ ಮೊದಲೇ ಆಗಿದ್ದು ಎಂದು ಹೇಳಿದ್ದಾರೆ.ದೇಶದಲ್ಲಿ ನಡೆಯಲಿದ್ದ ಅಂತರರಾಷ್ಟ್ರೀಯ ಕೂಟದ ಸಲಹೆಗಾರರಾಗಿ ತಾವು ಸೇವೆ ನೀಡಿದ್ದರಲ್ಲಿ ಕಾನೂನುಬಾಹಿರ ಅಥವಾ ಅನೈತಿಕವಾದದ್ದು ಏನೂ ಇಲ್ಲ. ತಮ್ಮ ಸೇವೆಗೆ ಅಧಿಕೃತವಾಗಿ, ಕಾನೂನು ಬದ್ಧವಾಗಿ ಶುಲ್ಕ ಪಾವತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಕಾಮನ್‌ವೆಲ್ತ್ ಕ್ರೀಡಾಕೂಟದ ಅವ್ಯವಹಾರಗಳ ತನಿಖೆ ನಡೆಸುತ್ತಿರುವ ಶುಂಗ್ಲು ಸಮಿತಿಗೆ ಸಂಪೂರ್ಣ ಸಹಕಾರ ನೀಡಿದ್ದು, ಅವಶ್ಯಕ ದಾಖಲೆಗಳನ್ನು ಹಸ್ತಾಂತರಿಸಿರುವುದಾಗಿ ತರೂರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry