ನೇಮಕಾತಿ ಆಯೋಗ ವಿಳಂಬ?

ಶುಕ್ರವಾರ, ಜೂಲೈ 19, 2019
28 °C
ಸರ್ಕಾರದ ನಿಲುವಿಗೆ `ನ್ಯಾಯಾಂಗ' ವಿರೋಧ

ನೇಮಕಾತಿ ಆಯೋಗ ವಿಳಂಬ?

Published:
Updated:

ನವದೆಹಲಿ (ಪಿಟಿಐ): ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಈಗಿರುವ ನೇಮಕಾತಿ ಮಂಡಳಿ ಪದ್ಧತಿಯನ್ನು ರದ್ದುಪಡಿಸಲು ಮುಂದಾಗಿರುವ ಕೇಂದ್ರದ ನಿರ್ಧಾರಕ್ಕೆ ನ್ಯಾಯಾಂಗ ವ್ಯವಸ್ಥೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಈ ಸಂಬಂಧ ಅಸ್ತಿತ್ವಕ್ಕೆ ಬರಬೇಕಾಗಿರುವ ನ್ಯಾಯಾಂಗ ನೇಮಕಾತಿ ಆಯೋಗ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಜಾರಿಗೆ ತರುವ ಅಗತ್ಯವೇ ಇಲ್ಲ; ಬದಲಿಗೆ ಎರಡು ದಶಕಗಳಷ್ಟು ಹಳೆಯದಾದ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗುವಂತೆ ನ್ಯಾಯಾಂಗದಿಂದ ತೀವ್ರ ಒತ್ತಡ ಬರುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.ನಿರ್ಗಮಿಸುತ್ತಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಇತ್ತೀಚೆಗೆ ಈ ಸಂಬಂಧ ಹೇಳಿಕೆ ನೀಡಿ, ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರದ ಉದ್ದೇಶಿತ ವ್ಯವಸ್ಥೆಯ ಬದಲಿಗೆ ಈಗಿರುವ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದು; ನ್ಯಾಯಾಂಗದ ಉನ್ನತ ಸ್ಥಾನಗಳಿಗೆ ನೇಮಕ ಮಾಡುವ ಮೊದಲು ಸುದೀರ್ಘ ಸಮಾಲೋಚನೆ ಅಗತ್ಯ ಎಂದು ಪ್ರತಿಪಾದಿಸಿದ್ದರು.ನ್ಯಾಯಮೂರ್ತಿ ಕಬೀರ್ ಅವರ ಉತ್ತರಾಧಿಕಾರಿ ಪಿ. ಸದಾಶಿವನ್ ಸಹ ನ್ಯಾಯಮೂರ್ತಿ ಕಬೀರ್ ಅವರ ಅಭಿಪ್ರಾಯವನ್ನೇ ಪುನರುಚ್ಚರಿಸಿ, ಈಗಿರುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಅಗತ್ಯವೇ ಇಲ್ಲ ಎಂದಿದ್ದಾರೆ.ಈ ನಡುವೆ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದ ಎಲ್ಲ ಮಸೂದೆಗಳನ್ನು ಒಂದೇ ಸಲ ಮಂಡಿಸಲು ವಿರೋಧ ಪಕ್ಷಗಳು ಕೇಂದ್ರವನ್ನು ಆಗ್ರಹಿಸಿವೆ.ಹಿರಿಯ ವಕೀಲರಿಗೆ ನಿವೃತ್ತಿಯ ನಂತರ ಸರ್ಕಾರಿ ಸಂಬಂಧದ ಕೆಲಸಗಳನ್ನು ವಹಿಸದೆ, ಈ ಕುರಿತು ನಿಷೇಧ ಹೇರಬೇಕು ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry