ನೇಮಕಾತಿ ಪ್ರಕಟಿಸಿ: ಸಚಿವರಿಗೆ ಮನವಿ

7

ನೇಮಕಾತಿ ಪ್ರಕಟಿಸಿ: ಸಚಿವರಿಗೆ ಮನವಿ

Published:
Updated:

2007-08ನೇ ಸಾಲಿನಲ್ಲಿ 29 ವರ್ಷಕ್ಕೆ ಮೀರಿದ 3300 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಂಡಿತ್ತು.

 

ಆದರೆ 3300 ಹುದ್ದೆಗಳಿಗೆ ಬದಲಾಗಿ 2254 ಹುದ್ದೆಗಳಿಗೆ ಭರ್ತಿ ಮಾಡಿಕೊಂಡು ಉಳಿದ 1046 ಸ್ಥಾನಗಳನ್ನು ತುಂಬಲು ಹಿಂದೆಮುಂದೆ ನೋಡುತ್ತಿದೆ.

 

ಸರ್ಕಾರದ ಈ ವಿಳಂಬ ಧೋರಣೆಯಿಂದ ವಯೋಮಿತಿ ಮೀರುತ್ತಿರುವ ಶಿಕ್ಷಕರು ದಿಕ್ಕು ತಪ್ಪಿದವರಂತಾಗಿದ್ದಾರೆ. ಶಿಕ್ಷಣ ಸಚಿವರು ತಕ್ಷಣ  1046 ಶಿಕ್ಷಕರ ನೇಮಕಾತಿ ಪಟ್ಟಿ ಪ್ರಕಟಿಸಿ ನಿರುದ್ಯೋಗಿ ಶಿಕ್ಷಕರಿಗೆ ದಾರಿ ತೋರಿಸಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry