ನೇಮಕಾತಿ ಪ್ರಕ್ರಿಯೆ ಸ್ಥಗಿತ ಒತ್ತಾಯಿಸಿ ಮನವಿ

7

ನೇಮಕಾತಿ ಪ್ರಕ್ರಿಯೆ ಸ್ಥಗಿತ ಒತ್ತಾಯಿಸಿ ಮನವಿ

Published:
Updated:

ಗುಲ್ಬರ್ಗ: ಸಂವಿಧಾನದ 371(ಜೆ) ತಿದ್ದುಪಡಿ ನಿಮಿತ್ತ ಕರ್ನಾಟಕ ಸರ್ಕಾರ ಕೈಗೊಳ್ಳುತ್ತಿರುವ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ಲೋಕಸೇವಾ ಆಯೋಗ ಮತ್ತು ರಾಜ್ಯ ಸರ್ಕಾರದ ಶಿಕ್ಷಣ, ಪೊಲೀಸ್, ಅಬಕಾರಿ ಮುಂತಾದ ಇಲಾಖೆಗಳಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ತಿದ್ದುಪಡಿ ಬರುವ ಮುಂಚೆಯೇ ಸಿಬ್ಬಂದಿ ನೇಮಕಾತಿ ಆದರೆ ಸಾವಿರಾರು ಉದ್ಯೋಗಗಳು ಕೈತಪ್ಪಿ, ಹೈ.ಕ. ಭಾಗದ ಯುವಕರಿಗೆ ಅನ್ಯಾಯವಾಗುತ್ತದೆ ಎಂದು ದೂರಿದ್ದಾರೆ.ಮುಂದಿನ ಒಂದು ವಾರದಲ್ಲಿ ರಾಜ್ಯ ಸರ್ಕಾರದ ಎಲ್ಲ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಿಲ್ಲಿಸದಿದ್ದರೆ ಹೋರಾಟ ನಡೆಸಿ ಸಚಿವ ಹಾಗೂ ಶಾಸಕರಿಗೆ ಘೇರಾವ್ ಹಾಕುವುದಾಗಿ ಎಚ್ಚರಿಸಿದ್ದಾರೆ.ಶಿವಶಂಕರ ಗಾರಂಪಳ್ಳಿ, ರಜನಿಕಾಂತ, ಚಂದ್ರಶೇಖರ ಹರಸೂರ, ಎಂ.ಎಸ್. ಪಾಟೀಲ ನರಿಬೋಳ, ಲೂಯಿಸ್ ಕೋರಿ, ಶರಣು, ಸುವರ್ಣ ವಾಡೇದ, ಇಂದ್ರ ಹಾಗೂ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry