ನೇರ ತೆರಿಗೆ ಸಂಗ್ರಹ ಹೆಚ್ಚಳ

7

ನೇರ ತೆರಿಗೆ ಸಂಗ್ರಹ ಹೆಚ್ಚಳ

Published:
Updated:

ನವದೆಹಲಿ (ಪಿಟಿಐ):  ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜನವರಿ ಅವಧಿಯಲ್ಲಿ ನೇರ ತೆರಿಗೆ ಮೂಲಕ ಸರ್ಕಾರ ಒಟ್ಟು ್ಙ3,17,501 ಕೋಟಿ ಸಂಗ್ರಹಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ 20.37ರಷ್ಟು ಪ್ರಗತಿ ದಾಖಲಿಸಿದೆ.ಕಳೆದ 10 ತಿಂಗಳಲ್ಲಿ ಕಾರ್ಪೊರೇಟ್ ಆದಾಯ ತೆರಿಗೆ ಸಂಗ್ರಹವೂ ಹೆಚ್ಚಿದ್ದು, ಶೇ 24ರಷ್ಟು ಪ್ರಗತಿಯೊಂದಿಗೆ   ರೂ.  2,16,872 ಕೋಟಿ ಸಂಗ್ರಹವಾಗಿದೆ. ವೈಯಕ್ತಿಕ ಆದಾಯ ತೆರಿಗೆ ಮೂಲಕ   ರೂ  1,00,191 ಕೋಟಿ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 11ರಷ್ಟು ಏರಿಕೆ ಕಂಡಿದೆ.ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಾರ, ತೆರಿಗೆ ಮರು ಪಾವತಿ ಕೂಡ ಶೇ 38ರಷ್ಟು ಹೆಚ್ಚಿದ್ದು,  ರೂ 53,688 ಕೋಟಿ ತಲುಪಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry