ನೇರ ತೆರಿಗೆ ಸಂಗ್ರಹ ಹೆಚ್ಚಳ

7

ನೇರ ತೆರಿಗೆ ಸಂಗ್ರಹ ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ  ಆರು ತಿಂಗಳಲ್ಲಿ ದೇಶದ ಒಟ್ಟು ತೆರಿಗೆ ಸಂಗ್ರಹ ಶೇ 21ರಷ್ಟು ಹೆಚ್ಚಿದ್ದು, ರೂ.4,25,712 ಕೋಟಿಗಷ್ಟಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಲ್ಲಿ ತೆರಿಗೆ ಸಂಗ್ರಹ ಕುಸಿತ ಕಂಡಿದೆ.ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಕಡಿತ ಮತ್ತು ತಯಾರಿಕೆ ಕ್ಷೇತ್ರದ ಪ್ರಗತಿ ಕುಸಿದಿರುವುದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಅಬಕಾರಿ ಮತ್ತು ಸೀಮಾ ಸುಂಕ ಸಂಗ್ರಹ ಇಳಿಕೆಯಾಗಿದೆ.   ಆದರೆ, ಏಪ್ರಿಲ್-ಸೆಪ್ಟೆಂಬರ್ ಅವಧಿಯ ಒಟ್ಟು  ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹ  ಹೆಚ್ಚಿದೆ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ  ಅಂಕಿ ಅಂಶಗಳು ತಿಳಿಸಿವೆ.ಸೆಪ್ಟೆಂಬರ್ ತಿಂಗಳ ಸೀಮಾ ಸುಂಕ ಸಂಗ್ರಹ ಶೇ 10ರಷ್ಟು ಇಳಿಕೆ ದಾಖಲಿಸಿದ್ದು, ರೂ.10,126 ಕೋಟಿಗಳಷ್ಟಾಗಿದೆ. ಅಬಕಾರಿ ತೆರಿಗೆಯೂ ಅಲ್ಪ ಇಳಿಕೆಯಾಗಿದ್ದು, ರೂ.11,417 ಕೋಟಿಗಳಷ್ಟಾಗಿದೆ. ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆಗಳನ್ನು ಒಳಗೊಂಡ ಒಟ್ಟು ತೆರಿಗೆ ಸಂಗ್ರಹ ಪ್ರಸಕ್ತ ವರ್ಷದ ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ ರೂ.2,08,971 ಕೋಟಿಯಿಂದ ರೂ.2,57,042 ಕೊಟಿಗಳಷ್ಟಾಗಿದೆ.ಮರುಪಾವತಿಯ ನಂತರ ಒಟ್ಟು ನೇರ ತೆರಿಗೆ ಸಂಗ್ರಹ ಈ ಅವಧಿಯಲ್ಲಿ ರೂ.1,94,812 ಕೋಟಿಗಳಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ರೂ.1,81,758 ಕೋಟಿಗಳಷ್ಟಿತ್ತು ಎಂದು ಹಣಕಾಸು ಸಚಿವಾಲಯ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry