ನೇರ ನಗದು ಜಾರಿಗೆ ಆಧಾರ್ ಕಡ್ಡಾಯ

7

ನೇರ ನಗದು ಜಾರಿಗೆ ಆಧಾರ್ ಕಡ್ಡಾಯ

Published:
Updated:

ನವದೆಹಲಿ (ಪಿಟಿಐ): ನೇರ ನಗದು ವರ್ಗಾವಣೆ ಯೋಜನೆಯ ಫಲಾನುಭವಿಗಳು ಆಧಾರ್ ಸಂಖ್ಯೆಯನ್ನು ಹೊಂದಿದ್ದಾರಾ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರವು ಆಯ್ದ 43 ಜಿಲ್ಲೆಗಳಿಗೆ ಸೂಚನೆ ನೀಡಿದೆ.ಜನವರಿ 1ರಿಂದ ಆರಂಭವಾಗುವ ಯೋಜನೆಗೂ ಮುನ್ನ ಇದನ್ನು ಖಚಿತಪಡಿಸಿಕೊಳ್ಳಬೇಕು. ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆ ಹೊಂದಿರಬೇಕು ಮತ್ತು ಬ್ಯಾಂಕ್ ಖಾತೆ ಇಲ್ಲದಿದ್ದ ಪಕ್ಷದಲ್ಲಿ ಹೊಸದಾಗಿ ಖಾತೆ ತೆರೆಯಬೇಕು ಎಂದು ಕೇಂದ್ರ ಹೇಳಿದೆ.ಈ ಸಂಬಂಧ ಯೋಜನಾ ಆಯೋಗವು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆಯನ್ನೂ ಕಳುಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry