ನೇರ ನಗದು ಯೋಜನೆ: ರಾಜ್ಯದಲ್ಲೂ ಜಾರಿ ಚಿಂತನೆ

7

ನೇರ ನಗದು ಯೋಜನೆ: ರಾಜ್ಯದಲ್ಲೂ ಜಾರಿ ಚಿಂತನೆ

Published:
Updated:

ತುಮಕೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನೇರ ನಗದು ಯೋಜನೆಯನ್ನು ರಾಜ್ಯ ಸರ್ಕಾರವೂ ಜಾರಿಗೆ ತರಲು ಚಿಂತನೆ ನಡೆಸಿದೆ.ಅಡುಗೆ ಅನಿಲ, ರಸಗೊಬ್ಬರ ಸಬ್ಸಿಡಿ ಸೇರಿದಂತೆ ಕೇಂದ್ರದ ವಿವಿಧ ಯೋಜನೆಗಳ ವಿದ್ಯಾರ್ಥಿ ವೇತನ, ಶಿಷ್ಯವೇತನ, ಸಾಮಾಜಿಕ ಭದ್ರತಾ ಪಿಂಚಣೆ ಯೋಜನೆಗಳನ್ನು ನೇರ ನಗದು ಯೋಜನೆಯಡಿ ತರಲಾಗುತ್ತಿದೆ. ಮೊದಲ ಹಂತದಲ್ಲಿ ವಿದ್ಯಾರ್ಥಿ ವೇತನ, ಜನನಿ ಸುರಕ್ಷಾ ಯೋಜನೆಯನ್ನು ನೇರ ನಗದು ಯೋಜನೆಯಡಿ ಜ. 1ರಿಂದ ಜಾರಿಗೆ ತರಲಿದೆ. ರಾಜ್ಯದಲ್ಲಿ ತುಮಕೂರು ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ.ಕೇಂದ್ರದ ಮಾದರಿಯನ್ನೇ ರಾಜ್ಯ ಸರ್ಕಾರ ಅನುಸರಿಸಲು ಹೊರಟಿದೆ. ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ವೇತನವನ್ನು ನೇರ ಸಹಾಯಧನ ಯೋಜನೆಯಡಿ ತರಲು ಉದ್ದೇಶಿಸಿದೆ. ಹೀಗಾಗಿ ಈ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಅಳವಡಿಸುವ ಕೆಲಸ ಮಾಡಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.`ರಾಜ್ಯದ ವಿವಿಧ ಯೋಜನೆಗಳನ್ನು ನೇರ ಸಹಾಯಧನ ಯೋಜನೆಯಡಿ ತರಲು ಫಲಾನುಭವಿಗಳನ್ನು ಗುರುತಿಸಿ ಅವರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಅಳವಡಿಸುವ ಕೆಲಸ ಆರಂಭಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಆರ್.ಕೆ.ರಾಜು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry