ನೇರ ಹೂಡಿಕೆ: ಸಿಬಿಐನಿಂದ ಚಿದಂಬರಂ ತನಿಖೆ

7

ನೇರ ಹೂಡಿಕೆ: ಸಿಬಿಐನಿಂದ ಚಿದಂಬರಂ ತನಿಖೆ

Published:
Updated:

ನವದೆಹಲಿ (ಪಿಟಿಐ): ಮಾರಿಷಸ್‌ ಮೂಲದ ಕಂಪೆನಿಯೊಂದಕ್ಕೆ ನೇರ ಹೂಡಿಕೆ ಮಾಡಲು ಅನುಮತಿ ನೀಡು­ವಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ವಹಿ­ಸಿದ ಪಾತ್ರದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯಿಂದ ಇದು ಬಹಿರಂಗಗೊಂಡಿದೆ.ಗ್ಲೋಬಲ್‌ ಕಮ್ಯುನಿಕೇಷನ್‌ ಸರ್ವೀಸಸ್‌ ಹೋಲ್ಡಿಂಗ್‌ ಕಂಪೆ­ನಿಯು ೨೦೦೬ರಲ್ಲಿ ಸುಮಾರು ೪೫೦೦ ಕೋಟಿ ರೂಪಾಯಿ ಹೂಡಿಕೆ ಮಾಡಲು ‘ವಿದೇಶಿ ಹೂಡಿಕೆ ಉತ್ತೇ­ಜನಾ ಮಂಡಳಿ’ಯ (ಎಫ್‌ಐಪಿಬಿ) ಅನುಮತಿ ಕೋರಿತ್ತು. ಇದಕ್ಕೆ ಅನುಮತಿ ನೀಡುವ ಅಧಿಕಾರ ಹಣಕಾಸು ವ್ಯವಹಾರಗಳ ಸಂಪುಟ ಸಮಿತಿಯದಾಗಿತ್ತು. ಆದರೆ ಆಗ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ಈ ಹೂಡಿಕೆಗೆ ಅನುಮತಿ ನೀಡಿದ್ದರು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ವಿವರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry