ನೇಹಾ ಹೊಸ ರೂಪ

7

ನೇಹಾ ಹೊಸ ರೂಪ

Published:
Updated:

`ಏನು ಮಾಡಲಿ? ಚಿತ್ರ ಇಂಥ ಸಾಹಸ ಮಾಡುವಂತೆ ಪ್ರೇರಣೆ ನೀಡಿತು. ಜಲಪಾತದಂಥ ನನ್ನ ಉದ್ದದ ಕೂದಲನ್ನು ತುಂಡರಿಸಿಕೊಂಡೆ~ ಹೀಗೆ ನೇಹಾ ಧುಪಿಯಾ ಹೇಳುತ್ತಿದ್ದಾರೆ.ತಮ್ಮ ಯಾವುದೇ ಚಿತ್ರಕ್ಕೂ ಕೇಶ ವಿನ್ಯಾಸವನ್ನು ಬದಲಿಸಿಕೊಳ್ಳದ 32ರ ನಟಿ, `ರಶ್~ ಚಿತ್ರಕ್ಕಾಗಿ ಕೂದಲಿಗೆ ಕತ್ತರಿ ತಾಕಿಸಿದ್ದಾರೆ. ತೀರ ಕಿವಿಯುದ್ದಕ್ಕೆ ಮೊಂಡುಗೊಳಿಸಿದ್ದಾರೆ.

ಚಿತ್ರದ ಪೋಸ್ಟರ್ ಮೇಲೆ ಬರೆದಿತ್ತಲ್ಲ, `ಜೋ ಆದ್ಮಿ ರಿಸ್ಕ್ ನಹಿ ಲೇತಾ, ಉಸ್ಕಾ ಸಬ್ ರಿಸ್ಕಿ ಬನ್‌ಜಾತಾ ಹೈ~ ಎಂದು, ಅದಕ್ಕೇ ಈ ರಿಸ್ಕ್ ತೆಗೆದುಕೊಂಡೆ.ಸಮಾಧಾನದ ಸಂಗತಿ ಎಂದರೆ ಎಲ್ಲರೂ ನನ್ನ ಹೊಸ ರೂಪವನ್ನು ಮೆಚ್ಚಿಕೊಂಡಿದ್ದಾರೆ. ಈ ಬಗೆಯ ಕೇಶ ವಿನ್ಯಾಸದಲ್ಲಿ ನಾನು ಚಂದ ಕಾಣುತ್ತಿದ್ದೇನೆ~ ಎಂದೆಲ್ಲ ನೇಹಾ ಹೇಳಿದ್ದಾರೆ.`ಈ ಚಿತ್ರದಲ್ಲಿರುವ ಪಾತ್ರ ಚಂದ ಕಾಣಿಸುವುದಷ್ಟೇ ಅಲ್ಲ, ಸರಳ ಮತ್ತು ಅತ್ಯಾಕರ್ಷಕವಾಗಿರಬೇಕಿತ್ತು. ಏನು ಮಾಡುವುದೆಂದು ಸಾಕಷ್ಟು ಚರ್ಚಿಸಿದೆವು. ಕೇಶ ವಿನ್ಯಾಸದ ವಿಷಯ ಬಂದಾಗ ಪಾತ್ರಕ್ಕಾಗಿ ತಲೆ ತಗ್ಗಿಸಲೇಬೇಕಾಯಿತು~ ಎನ್ನುತ್ತಾರೆ ನೇಹಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry