ನೈಜೀರಿಯಾದ ಏರ್‌ಟೆಲ್ ಕಚೇರಿ ಮೇಲೆ ದಾಳಿ

7

ನೈಜೀರಿಯಾದ ಏರ್‌ಟೆಲ್ ಕಚೇರಿ ಮೇಲೆ ದಾಳಿ

Published:
Updated:

ಅಬುಜಾ (ಪಿಟಿಐ): ನೈಜೇರಿಯಾದ ಕನೊ ನಗರದಲ್ಲಿ ಶನಿವಾರ ಭಾರತೀಯ ಮೂಲದ ದೂರಸಂಪರ್ಕ ಕಂಪೆನಿ ಭಾರ್ತಿ ಏರ್‌ಟೆಲ್‌ನ ಸ್ಥಳೀಯ ಕಚೇರಿ ಮೇಲೆ ನಡೆದ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ.`ದಾಳಿಕೋರರಿಬ್ಬರು ಏರ್‌ಟೆಲ್ ಕಚೇರಿಯೊಳಗೆ ಪ್ರತ್ಯೇಕ ವಾಹನಗಳನ್ನು ನುಗ್ಗಿಸಿದರು' ಎಂದು ದಾಳಿಯಲ್ಲಿ ಬದುಕುಳಿದ ಬಯೊ ಓಶೋ ಹೇದ್ದಾರೆ.

ಈ ಸಂದರ್ಭದಲ್ಲಿ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆಸಿದೆ. ದೂರಸಂಪರ್ಕ ಕಂಪೆನಿಗಳ ಮೇಲೆ ಬೊಕೊ ಹರಾಂ ಪಂಗಡದವರು ಈ ಹಿಂದೆ ಕೂಡ ದಾಳಿ ನಡೆಸಿದ್ದರು. ತಮ್ಮ ಸಂಘಟನೆಯ ಸದಸ್ಯರನ್ನು ಸೆರೆ ಹಿಡಿಯಲು ಈ ಕಂಪೆನಿಗಳು ಭದ್ರತಾ ಪಡೆಗೆ ನೆರವು ನೀಡುತ್ತಿವೆ ಎನ್ನುವುದು ಇವರ ಆರೋಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry