ಮಂಗಳವಾರ, ಅಕ್ಟೋಬರ್ 22, 2019
22 °C

ನೈಜೀರಿಯಾ: ತೈಲ ಸಬ್ಸಿಡಿ ರದ್ದು

Published:
Updated:

ಅಬುಜಾ (ಪಿಟಿಐ): ಇಂಧನ ತೈಲಗಳ ಮೇಲಿನ ಸಬ್ಸಿಡಿ ರದ್ದುಗೊಳಿಸಲು ನೈಜೀರಿಯಾ ಸರ್ಕಾರ ಸೋಮವಾರ ನಿರ್ಧರಿಸಿದೆ. ಇದಕ್ಕೆ ಕಾರ್ಮಿಕ ವಲಯದಿಂದ ಭಾರಿ ಪ್ರತಿರೋಧ ವ್ಯಕ್ತವಾಗುವ ಆತಂಕ ಎದುರಾಗಿದೆ.ಸಂಪದ್ಭರಿತವಾಗಿ ತೈಲ ಆಕರಗಳನ್ನು ಹೊಂದಿರುವ ನೈಜಿರಿಯಾದಲ್ಲಿ ಸರ್ಕಾರ ಸಬ್ಸಿಡಿಯನ್ನು ಹಿಂಪಡೆದಿರುವುದಕ್ಕೆ ಜನರು ಅಸಮಾಧಾನಗೊಂಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ತೈಲ ಉತ್ಪನ್ನಗಳ ಬೆಲೆ ಹೆಚ್ಚಳವಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.ಸಬ್ಸಿಡಿ ದರದಲ್ಲಿ ತೈಲ ಒದಗಿಸಲು ಸರ್ಕಾರ 800 ಕೋಟಿ ಡಾಲರ್‌ಗೂ ಹೆಚ್ಚು ಖರ್ಚು ಮಾಡುತ್ತಿದೆ. ಇದನ್ನು ರದ್ದು ಮಾಡಿದರೆ ಅಷ್ಟೂ ಹಣ ಉಳಿತಾಯವಾಗುತ್ತದೆ ಮತ್ತು ಇದರಿಂದ ಬಡವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂದು ನೈಜೀರಿಯಾ ಅಧ್ಯಕ್ಷ ಗುಡ್‌ಲಕ್ ಜೋನಾಥನ್ ಹೇಳಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)