ನೈಜೀರಿಯಾ ವಿಮಾನ ಅಪಘಾತ 153ಕ್ಕೂ ಹೆಚ್ಚು ಸಾವಿನ ಶಂಕೆ

7

ನೈಜೀರಿಯಾ ವಿಮಾನ ಅಪಘಾತ 153ಕ್ಕೂ ಹೆಚ್ಚು ಸಾವಿನ ಶಂಕೆ

Published:
Updated:
ನೈಜೀರಿಯಾ ವಿಮಾನ ಅಪಘಾತ 153ಕ್ಕೂ ಹೆಚ್ಚು ಸಾವಿನ ಶಂಕೆ

ಲಾಗೋಸ್ (ಎಪಿ/ಪಿಟಿಐ): ನೈಜೀರಿಯಾದ ವಾಣಿಜ್ಯ ರಾಜಧಾನಿ ಲಾಗೋಸ್ ನಗರದಿಂದ ರಾಜಧಾನಿ ಅಬುಜಾಗೆ ಹೊರಟಿದ್ದ ಪ್ರಯಾಣಿಕರ ವಿಮಾನವು ಭಾನುವಾರ ಅಪಘಾತಕ್ಕೀಡಾಗಿದ್ದು, ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ 153 ಪ್ರಯಾಣಿಕರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

`ಡಾನಾ~ ಸಂಸ್ಥೆಗೆ ಸೇರಿದ ವಿಮಾನವು ಲಾಗೋಸ್ ನಗರದ ಜನವಸತಿ ಪ್ರದೇಶದ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ಸ್ಫೋಟಗೊಂಡಿತು. ಇದರಿಂದ ತಕ್ಷಣ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಆವರಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ನೈಜೀರಿಯಾದ ನಾಗರಿಕ ವಿಮಾನಯಾನ ಇಲಾಖೆ ಹೇಳಿದೆ. ಇದರ ಹೊರತಾಗಿ ವಿಮಾನ ಡಿಕ್ಕಿ ಹೊಡೆದ ಕಟ್ಟಡದಲ್ಲಿದ್ದ ಜನರೂ ಘಟನೆಯಲ್ಲಿ ಮೃತಪಟ್ಟಿರುವ ಶಂಕೆ ಇದೆ. ಹೀಗಾಗಿ ಮೃತರ ಸಂಖ್ಯೆ 153ನ್ನು ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದುವರೆಗೂ ಘಟನೆಯಲ್ಲಿ ಮೃತಪಟ್ಟವರ ನಿಖರವಾದ ಸಂಖ್ಯೆ ಲಭ್ಯವಾಗಿಲ್ಲ. ಬದುಕುಳಿದ ಪ್ರಯಾಣಿಕರಿಗಾಗಿ ಶೋಧ ನಡೆದಿದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ನೈಜೀರಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಲಾಗೋಸ್‌ನಿಂದ ವಿಮಾನ ಹೊರಟಿದ್ದ ವೇಳೆ ಆಗಸ ಸ್ವಚ್ಛಂದವಾಗಿತ್ತು. ಹೀಗಾಗಿ ಅಪಘಾತಕ್ಕೆ ಹವಾಮಾನ ವೈಪರೀತ್ಯ ಕಾರಣವಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ಇದೇ ವೇಳೆ ವಿಮಾನ ಹಠಾತ್ತನೆ ಪತನಕ್ಕೀಡಾದುದಕ್ಕೆ ತಾಂತ್ರಿಕ ದೋಷ ಕಾರಣವಿರಬಹುದೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry