ನೈಟಿಯಲ್ಲೇ ಹೊರಬಂದ ಭಾರತ ಮೂಲದ ಗೌ‌ರ್ನರ್

7

ನೈಟಿಯಲ್ಲೇ ಹೊರಬಂದ ಭಾರತ ಮೂಲದ ಗೌ‌ರ್ನರ್

Published:
Updated:

ವಾಷಿಂಗ್ಟನ್ (ಐಎಎನ್‌ಎಸ್/ಪಿಟಿಐ):  ಮಕ್ಕಳು ಶಾಲೆಗೆ ಹೋಗುವುದನ್ನು ನೋಡಲು ನೈಟಿಯಲ್ಲೇ  ಗೌರ್ನರ್ ಬಂಗಲೆಯಿಂದ ಹೊರಗೆ ಬರುವ ಮೂಲಕ ದಕ್ಷಿಣ ಕರೋಲಿನಾದಲ್ಲಿರುವ ಭಾರತ ಮೂಲದ ಗೌರ್ನರ್ ರಿಪಬ್ಲಿಕನ್ ಪಕ್ಷದ ನಿಕಿ ಹ್ಯಾಲೆ ಬಿಸಿಬಿಸಿ ಸುದ್ದಿಗೆ ಕಾರಣರಾಗಿದ್ದಾರೆ.ಸಿಖ್ ವಲಸಿಗ ದಂಪತಿಯ ಪುತ್ರಿ ಹ್ಯಾಲೆ ಈ ವಿಷಯವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.`ಮಕ್ಕಳನ್ನು ಶಾಲೆಗೆ ಕಳುಹಿಸಲು ಈ ಉಡುಪು ತೊಟ್ಟು ಹೊರಗೆ ಬಂದಿದ್ದೆ ಎಂದಿದ್ದಾರೆ'. ಈ ವಿಷಯವನ್ನು ಡೆಮಾಕ್ರಟಿಕ್ ಪಕ್ಷದ ಅವರ ವಿರೋಧಿಗಳು ಟೀಕಿಸಿದ್ದಾರೆ. ಜನರೊಂದಿಗೆ  ಮಾಹಿತಿ ಹಂಚಿಕೊಳ್ಳುವಾಗ ಯಾವ ವಿಷಯಕ್ಕೆ ಆದ್ಯತೆ ನೀಡಬೇಕೆಂಬುದು ಅವರಿಗೆ ತಿಳಿದಿಲ್ಲ ಎಂದು ಗೇಲಿ ಮಾಡಿದ್ದಾರೆ. 2014ರಲ್ಲಿ ನಡೆಯುವ ಚುನಾವಣೆಯಲ್ಲಿ ನಿಕಿ ಹ್ಯಾಲೆ ಸ್ಪರ್ಧಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry