ಸೋಮವಾರ, ಮೇ 10, 2021
26 °C

ನೈಟ್ ರೈಡರ್ಸ್ಸ್‌ಗೆ ಗೆಲುವಿನ ಓಟ ಮುಂದುವರಿಸುವ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಮೊದಲ ಎರಡು ಹೆಜ್ಜೆಯಲ್ಲಿ ಮುಗ್ಗರಿಸಿದ್ದ ಕೋಲ್ಕತ್ತ ನೈಟ್ ರೈಡರ್ಸ್‌ಗೆ ನಂತರ ಸತತ ಎರಡು ಪಂದ್ಯಗಳಲ್ಲಿ ಜಯ ಸಿಕ್ಕಿದೆ. ಅದರ ಪರಿಣಾಮವಾಗಿ ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡು ಗೆಲುವಿನ ಓಟ ಮುಂದುವರಿಸುವ ವಿಶ್ವಾಸವೂ ಮೂಡಿದೆ.ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿ ನೈಟ್ ರೈಡರ್ಸ್ ಆರಂಭ ಉತ್ತಮವಾಗಿರಲಿಲ್ಲ. ದೆಹಲಿ ಡೇರ್ ಡೆವಿಲ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ವಿರುದ್ಧದ ಸೋಲು ಸಹನೀಯ ಎನಿಸಿರಲಿಲ್ಲ. ಆದರೆ ಆನಂತರ ಪುಟಿದೆದ್ದ ಶಾರೂಖ್ ಖಾನ್ ಒಡೆತನದ ಈ ತಂಡವು ಪ್ರದರ್ಶನ ಮಟ್ಟ ಹೆಚ್ಚಿಸಿಕೊಂಡು ಹೋರಾಡಿದ್ದು ಅಚ್ಚರಿ.ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ 42 ರನ್‌ಗಳ ಅಂತರದ ವಿಜಯವು ಹೊಸ ಚೈತನ್ಯಕ್ಕೆ ಕಾರಣ. ರಾಜಸ್ತಾನ್ ರಾಯಲ್ಸ್ ಎದುರು ಸಿಕ್ಕ ಐದು ವಿಕೆಟ್‌ಗಳ ಜಯವಂತೂ ಹುಮ್ಮಸ್ಸು ಇಮ್ಮಡಿ ಆಗುವಂತೆ ಮಾಡಿತು. ಈಗ ಅದೇ ಪ್ರದರ್ಶನವನ್ನು ಕಾಯ್ದುಕೊಂಡು ಮುನ್ನುಗ್ಗುವುದು ಗಂಭೀರ್ ನೇತೃತ್ವದ ತಂಡದ ಮುಂದಿರುವ ಸವಾಲು.ಭಾನುವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನೈಟ್ ರೈಡರ್ಸ್ ಎದುರು ಹೋರಾಡಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಸ್ಥಿತಿ ಸ್ವಲ್ಪ ಆತಂಕಕಾರಿ. ಅದು ತನ್ನ ಮೊದಲ ಎರಡು ಪಂದ್ಯಗಳಲ್ಲಿನ ನಿರಾಸೆಯ ನಂತರ ಗೆಲುವಿನ ಸವಿಯುಂಡಿದ್ದು ಪುಣೆ ವಾರಿಯರ್ಸ್ ವಿರುದ್ಧ. ಮೊಹಾಲಿಯಲ್ಲಿ ಸೌರವ್ ಗಂಗೂಲಿ ನಾಯಕತ್ವದ ತಂಡವನ್ನು ಮಣಿಸಿದ್ದರೂ ಅದು ನಿಶ್ಚಿತೆಯಿಂದ ಇರಲು ಸಾಧ್ಯವಿಲ್ಲ. ಪಂಜಾಬ್ ಕ್ರಿಕೆಟ್ ಸಂಸ್ಥೆ ಅಂಗಳಕ್ಕೂ ಹಾಗೂ ಈಡನ್ ಗಾರ್ಡನ್ಸ್‌ನಲ್ಲಿನ ವಾತಾವರಣಕ್ಕೂ ಭಾರಿ ವ್ಯತ್ಯಾಸವಿದೆ. ಜೊತೆಗೆ ನೈಟ್ ರೈಡರ್ಸ್ ಇಲ್ಲಿ ಕಳೆದ ಪಂದ್ಯದಲ್ಲಿ ವಿಶ್ವಾಸಪೂರ್ಣ ಆಟವಾಡಿದೆ.ಪಂದ್ಯ ಆರಂಭ: ಸಂಜೆ 4.00ಕ್ಕೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.