ಭಾನುವಾರ, ನವೆಂಬರ್ 17, 2019
20 °C

ನೈಟ್ ರೈಡರ್ಸ್ ತಂಡದ ಶುಭಾರಂಭ

Published:
Updated:

ಕೋಲ್ಕತ್ತ: ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಐಪಿಎಲ್ ಆರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತ ನೈಟ್    ರೈಡರ್ಸ್ ವಿರುದ್ಧ ಆಘಾತ ಅನುಭವಿಸಿದೆ. ಸುನಿಲ್ ನಾರಾಯಣ್ (13ಕ್ಕೆ4) ಹಾಗೂ ನಾಯಕ ಗೌತಮ್ ಗಂಭೀರ್ (42) ಅವರ ಸೊಗಸಾದ ಆಟದ ನೆರವಿನಿಂದ ರೈಡರ್ಸ್ ಆರು ವಿಕೆಟ್‌ಗಳ ಜಯಭೇರಿ ಮೊಳಗಿಸಿತು.ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ  ಡೇರ್‌ಡೆವಿಲ್ಸ್ ನೀಡಿದ 129 ರನ್‌ಗಳ ಗುರಿಯನ್ನು ಶಾರುಖ್ ಖಾನ್ ಮಾಲೀಕತ್ವದ ನೈಟ್ ರೈಡರ್ಸ್ 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. 29 ಎಸೆತ ಎದುರಿಸಿದ ಗಂಭೀರ್ ಒಂದು ಸಿಕ್ಸರ್ ಹಾಗೂ 5 ಬೌಂಡರಿ ಗಳಿಸಿದರು.  ಕಾಲಿಸ್ ಹಾಗೂ ಮನೋಜ್ ತಿವಾರಿ ಅವರಿಗೆ ಉತ್ತಮ ಬೆಂಬಲ ನೀಡಿದರು. ಡೇರ್‌ಡೆವಿಲ್ಸ್‌ನ ಶಹಬಾಜ್ ನದೀಮ್ (22ಕ್ಕೆ2) ನಡೆಸಿದ ಪ್ರಯತ್ನ ಸಾಕಾಗಲಿಲ್ಲ.ಇದಕ್ಕೂ ಮೊದಲು ಟಾಸ್ ಗೆದ್ದ ಗಂಭೀರ್ ನೇತೃತ್ವದ ನೈಟ್ ರೈಡರ್ಸ್ ಕ್ಷೇತ್ರರಕ್ಷಣೆ ಆಯ್ದುಕೊಂಡಿತು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ವೇಗಿ ಬ್ರೆಟ್ ಲೀ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ಯುವ ಬ್ಯಾಟ್ಸ್‌ಮನ್ ಉನ್ಮುಕ್ತ್ ಚಾಂದ್ ಅವರನ್ನು ಬೌಲ್ಡ್ ಮಾಡಿದರು. ಪ್ರಥಮ ಓವರ್‌ನಿಂದಲೇ ಸಂಕಷ್ಟಕ್ಕೆ ಸಿಲುಕಿದ ಡೆಲ್ಲಿ ತಂಡ 20 ಓವರ್‌ಗಳಲ್ಲಿ 128 ರನ್ ಕಲೆಹಾಕಿ ಎಲ್ಲಾ ವಿಕೆಟ್ ಕಳೆದುಕೊಂಡಿತು.ಕುಸಿತದ ಹಾದಿ: ಡೇರ್‌ಡೆವಿಲ್ಸ್ ತಂಡದ ಎಂಟು ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಮೊತ್ತ ಮುಟ್ಟದೇ ಪೆವಿಲಿಯನ್ ಸೇರಿಕೊಂಡರು. ನಾಯಕ ಮಾಹೇಲ ಜಯವರ್ಧನೆ ಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡದೇ ಹೋಗಿದ್ದರೆ ಡೇರ್‌ಡೆವಿಲ್ಸ್ 100 ರನ್‌ಗಳ ಗೆರೆ ಮುಟ್ಟುವುದೇ ಕಷ್ಟವಿತ್ತು. 52 ಎಸೆತ ಎದುರಿಸಿದ ಜಯವರ್ಧನೆ ಎಂಟು ಬೌಂಡರಿ ಹಾಗೂ ಒಂದು ಅಮೋಘ ಸಿಕ್ಸರ್ ಸೇರಿದಂತೆ 66 ರನ್ ಗಳಿಸಿದರು.ಸುನಿಲ್, ವೇಗಿ ಬ್ರೆಟ್ ಲೀ (40ಕ್ಕೆ2) ಹಾಗೂ ರಜತ್ ಭಾಟಿಯಾ (23ಕ್ಕೆ2) ಡೇರ್‌ಡೆವಿಲ್ಸ್ ತಂಡದ ಕುಸಿತಕ್ಕೆ ಕಾರಣರಾದರು.

ಈ ಪಂದ್ಯ ವೀಕ್ಷಿಸಲು ಕಲಾವಿದರ ದಂಡೇ `ಸಿಟಿ ಆಫ್ ಜಾಯ್' ಖ್ಯಾತಿಯ ಕೋಲ್ಕತ್ತ ನಗರದಲ್ಲಿ ನೆರೆದಿತ್ತು. ಅಕ್ಷಯ್ ಕುಮಾರ್, ಇಮ್ರಾನ್ ಖಾನ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಇತರ ತಾರೆಯರು ಕ್ರೀಡಾಂಗಣದಲ್ಲಿದ್ದರು.ಸ್ಕೋರ್ ವಿವರ

ಡೆಲ್ಲಿ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ 128

ಉನ್ಮುಕ್ತ್ ಚಾಂದ್ ಬಿ ಬ್ರೆಟ್ ಲೀ  00

ಡೇವಿಡ್ ವಾರ್ನರ್ ಸಿ ಜಾಕ್ ಕಾಲಿಸ್ ಬಿ ಸುನಿಲ್ ನಾರಾಯಣ  21

ಮಾಹೇಲ ಜಯವರ್ಧನೆ ಸಿ ಸುನಿಲ್ ನಾರಾಯಣ ಬಿ ಬ್ರೆಟ್ ಲೀ  66

ಮನ್‌ಪ್ರೀತ್ ಜುನೆಜಾ ಸಿ ಶುಕ್ಲಾ ಬಿ ಲಕ್ಷ್ಮಿಪತಿ ಬಾಲಾಜಿ   08

ನಮನ್ ಓಜಾ ಸಿ ಬ್ರೆಟ್ ಲೀ ಬಿ ರಜತ್ ಭಾಟಿಯಾ  09

ಜೊಹಾನ್ ಬೋಥಾ ಎಲ್‌ಬಿಡಬ್ಲ್ಯು ಬಿ ರಜತ್ ಭಾಟಿಯಾ  07

ಇರ್ಫಾನ್ ಪಠಾಣ್ ಸಿ ತಿವಾರಿ ಬಿ ಸುನಿಲ್ ನಾರಾಯಣ  04

ಆ್ಯಂಡ್ರೆ ರಸೆಲ್ ಸಿ ಮತ್ತು ಬಿ ಸುನಿಲ್ ನಾರಾಯಣ  04

ಶಾಬಾಜ್ ನದೀಮ್ ರನ್ ಔಟ್ (ಬಿಸ್ಲಾ/ನಾರಾಯಣ)  04

ಆಶಿಶ್ ನೆಹ್ರಾ ಸಿ ಶುಕ್ಲಾ ಬಿ ಸುನಿಲ್ ನಾರಾಯಣ  00

ಉಮೇಶ್ ಯಾದವ್ ಔಟಾಗದೆ  00

ಇತರೆ: (ಬೈ-1, ವೈಡ್-4) 05ವಿಕೆಟ್ ಪತನ: 1-0 (ಉನ್ಮುಕ್ತ್; 0.1), 2-44 (ವಾರ್ನರ್; 5.5), 3-59 (ಜುನೆಜಾ; 8.5), 4-79 (ನಮನ್; 11.6), 5-88 (ಬೋಥಾ; 13.2), 6-97 (ಪಠಾಣ್; 15.2), 7-113 (ರಸೆಲ್; 17.5), 8-125 (ಜಯವರ್ಧನೆ; 18.6), 9-128 (ನೆಹ್ರಾ; 19.5), 10- (ನದೀಮ್; 19.6).

ಬೌಲಿಂಗ್: ಬ್ರೆಟ್ ಲೀ 4-0-40-2, ಜಾಕ್ ಕಾಲಿಸ್ 3-0-23-0, ಲಕ್ಷ್ಮಿಪತಿ ಬಾಲಾಜಿ 4-0-20-1, ಸುನಿಲ್ ನಾರಾಯಣ 4-0-13-4, ರಜತ್ ಭಾಟಿಯಾ 4-0-23-2, ಲಕ್ಷ್ಮಿ ರತನ್ ಶುಕ್ಲಾ 1-0-8-0.  ಕೋಲ್ಕತ್ತ ನೈಟ್ ರೈಡರ್ಸ್ 18.4 ಓವರ್‌ಗಳಲ್ಲಿ  4 ವಿಕೆಟ್ ನಷ್ಟಕ್ಕೆ 129ಮನ್ವಿಂದರ್ ಬಿಸ್ಲಾ ಸಿ ಉನ್ಮುಕ್ತ್ ಚಾಂದ್ ಬಿ ಆಶೀಶ್ ನೆಹ್ರಾ  04

ಗೌತಮ್ ಗಂಭೀರ್ ಎಲ್‌ಬಿಡಬ್ಲ್ಯು ಬಿ ಜೋಹಾನ್ ಬೋಥಾ  42

ಜಾಕ್ ಕಾಲಿಸ್ ಸಿ ಉನ್ಮುಕ್ತ್ ಚಾಂದ್ ಬಿ ಶಹಬಾಜ್ ನದೀಮ್  23

ಮನೋಜ್ ತಿವಾರಿ ಸಿ ನಮನ್ ಓಜಾ ಬಿ ಶಹಬಾಜ್ ನದೀಮ್  23

ಎಯೋನ್ ಮಾರ್ಗನ್ ಔಟಾಗದೆ  14

ಯೂಸುಫ್ ಪಠಾಣ್ ಔಟಾಗದೆ  18

ಇತರೆ (ಲೆಗ್‌ಬೈ-2, ವೈಡ್-3)  05ವಿಕೆಟ್ ಪತನ: 1-5 (ಬಿಸ್ಲಾ; 1.4); 2-52 (ಕಾಲಿಸ್; 7.2); 3-93 (ಗಂಭೀರ್;13.1); 4-99 (ತಿವಾರಿ; 14.2)

ಬೌಲಿಂಗ್: ಇರ್ಫಾನ್ ಪಠಾಣ್ 2-1-15-0, ಆಶೀಶ್ ನೆಹ್ರಾ 3-0-20-1, ಉಮೇಶ್ ಯಾದವ್ 3-0-23-0 (ವೈಡ್-2), ಶಹಬಾಜ್ ನದೀಮ್ 4-0-22-2, ಜೋಹಾನ್ ಬೋಥಾ 3.4-0-23-1, ಆ್ಯಂಡ್ರೆ ರಸೆಲ್ 3-0-24-0 (ವೈಡ್-1)

ಪಂದ್ಯಶ್ರೇಷ್ಠ: ಸುನಿಲ್ ನಾರಾಯಣ್.

 

ಪ್ರತಿಕ್ರಿಯಿಸಿ (+)