ನೈತಿಕತೆ ರೂಢಿಸುವ ಶಿಕ್ಷಣ ಇಂದಿನ ಅಗತ್ಯ

ಶುಕ್ರವಾರ, ಮೇ 24, 2019
29 °C

ನೈತಿಕತೆ ರೂಢಿಸುವ ಶಿಕ್ಷಣ ಇಂದಿನ ಅಗತ್ಯ

Published:
Updated:

ಚಿಕ್ಕಮಗಳೂರು: ನೈತಿಕತೆ ರೂಢಿಸಿಕೊಡುವ ಶಿಕ್ಷಣ ಇಂದಿನ ಅಗತ್ಯ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಆಯುಕ್ತ ಎ.ಎನ್.ಮಹೇಶ್ ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಘಟಕವು ವಿವಿಧ ಶಾಲೆಗಳ ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್‌ಬುಲ್ಸ್ ತಂಡಗಳ ನಾಯಕರು ಮತ್ತು ಉಪ ನಾಯಕರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.ದೇಶದಲ್ಲಿ ಬಾಂಬ್ ಸ್ಫೋಟ, ಭಯೋತ್ಪಾದನೆ ಚಟುವಟಿಕೆ ನಿರಂತರವಾಗಿ ನಡೆಯುತ್ತಲೇ ಇವೆ. ಇನ್ನೊಂದೆಡೆ ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಪ್ರಜಾಪ್ರಭುತ್ವ ಮೌಲ್ಯ ಕುಸಿಯಲು ಕಾರಣವಾಗಿವೆ ಎಂದುಅವರು ಕಳವಳ ವ್ಯಕ್ತಪಡಿಸಿದರು.ಈ ಶಿಬಿರದಲ್ಲಿ ತರಬೇತಿ ಪಡೆದು ನಾಯಕ-ಉಪ ನಾಯಕರು ಶಾಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.ತಾಲ್ಲೂಕಿನ ಎಲ್ಲ ಶಾಲೆಗಳನ್ನು ಸ್ಕೌಟ್ಸ್-ಗೈಡ್ಸ್ ತಂಡ ರಚಿಸಲು ಸಹಕರಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಭರವಸೆ ನೀಡಿದರು.ಸ್ಕೌಟ್ಸ್ ತರಬೇತಿ ಜಿಲ್ಲಾ ಆಯುಕ್ತೆ ಸಂಧ್ಯಾರಾಣಿ, ಸ್ಥಾನಿಕ ಆಯುಕ್ತ ನೀಲಕಂಠಾಚಾರ್, ಹೊನ್ನೇಗೌಡ, ತಾಲ್ಲೂಕು ಸಂಸ್ಥೆ ಕಾರ್ಯದರ್ಶಿ ಗಂಗಾಧರ ಆರಾಧ್ಯ, ರಾಜ್ಯ ಸಮಿತಿ ಸದಸ್ಯ ಕಿರಣ್‌ಕುಮಾರ್, ರಾಘವೇಂದ್ರ, ಸುಪ್ರಿಯಾ ಕಿರಣ್, ವಿಜಯಲಕ್ಷ್ಮಿ, ವಾಸಂತಿ, ಜಿಲ್ಲಾ ಸಂಯೋಜಕ ದಾದಾ ಸಾಹೇಬ್ ಅತ್ತಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry