ನೈನಾ `ಫಿಕ್ಕಿ' ಅಧ್ಯಕ್ಷೆ

7

ನೈನಾ `ಫಿಕ್ಕಿ' ಅಧ್ಯಕ್ಷೆ

Published:
Updated:

ನವದೆಹಲಿ (ಪಿಟಿಐ): `ಎಚ್‌ಎಸ್‌ಬಿಸಿ' ಇಂಡಿಯಾದ ದೇಶೀಯ ಮುಖ್ಯಸ್ಥೆ ನೈನಾ ಲಾಲ್ ಕಿದ್ವಾಯಿ (55)  ಶನಿವಾರ ಇಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು.`ಫಿಕ್ಕಿ'ಯ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಗೌರವವೂ ನೈನಾ ಅವರಿಗೆ ಲಭಿಸಿದೆ. ಆರ್. ವಿ ಕನೊರಿಯಾ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ಅವರು ತುಂಬಲಿದ್ದಾರೆ.ಹಾರ್ವಡ್ ವಿಶ್ವವಿದ್ಯಾಲಯದಿಂದ `ಎಂಬಿಎ' ಪದವಿ ಪಡೆದಿರುವ ನೈನಾ, ಫಾರ್ಚೂನ್ ನಿಯತಕಾಲಿಕದ ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry