ನೈಪಾಲರ ಅಪ್ರಬುದ್ಧ ಹೇಳಿಕೆ

ಗುರುವಾರ , ಜೂಲೈ 18, 2019
22 °C

ನೈಪಾಲರ ಅಪ್ರಬುದ್ಧ ಹೇಳಿಕೆ

Published:
Updated:

ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಲೇಖಕ ವಿ.ಎಸ್. ನೈಪಾಲರು ರಾಯಲ್ ಜಿಯಾಗ್ರಫಿಕ್ ಸೊಸೈಟಿಗೆ ನೀಡಿದ ಸಂದರ್ಶನದ ವಿವರವನ್ನು ಪತ್ರಿಕೆಗಳಲ್ಲಿ ಓದಿದೆ.ಅವರು ತಮ್ಮ ಸರಿಸಮಾನರಾದ ಯಾವ ಲೇಖಕಿಯೂ ಜಗತ್ತಿನಲ್ಲಿ ಇಲ್ಲವೆಂದು ಹೇಳಿದ್ದಾರೆ.ಅನೇಕರಿಗೆ ತಾವೇ ಪರಮಶ್ರೇಷ್ಠವೆಂಬ ಭಾವನೆ ಇರುತ್ತದೆ. ನೈಪಾಲರೂ ಇದಕ್ಕೆ ಹೊರತಲ್ಲ. ಅದರಿಂದ ಈ ಹೇಳಿಕೆ ಕುರಿತು ನನ್ನ ತಕರಾರು ಇಲ್ಲ.ಆದರೆ ನೈಪಾಲರು `ಸಮಾನರಾರಿಹರೈ~ ಎಂಬ ಲಹರಿಯಿಂದ ಮುಂದುವರಿದು ತೂಕ ತಪ್ಪಿ ಎಡವಿದ್ದಾರೆ:`ಮಹಿಳೆಯರ ಆಲೋಚನೆ, ಭಾವನೆ, ಮತ್ತು ದೃಷ್ಟಿಕೋನ ತೀರಾ ಸಂಕುಚಿತವಾದುದು.ಅವರು ಮನೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗದೆ ಬರವಣಿಗೆಗೆ ಇಳಿಯುತ್ತಾರೆ~ ಎಂದು ಬಹಳ ಹಗುರವಾಗಿ ಮಾತಾಡಿದ್ದಾರೆ.ತಾತ್ಸಾರದಿಂದ ಕೂಡಿದ ಈ ಬಾಲಿಶ ಹೇಳಿಕೆ ಅಪಾಯಕಾರಿ. ಅವರ ಈ ಉಡಾಫೆಯ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.ಮಹಿಳೆಯ ಬದುಕು ಮನೆಯನ್ನು ನೋಡಿಕೊಳ್ಳುವುದಕ್ಕೆ ಸೀಮಿತವೆಂಬುದು ಅವರ ಮಾತಿನ ಸಾರಾಂಶ. ಮನೆಯನ್ನು ಸರಿಯಾಗಿ ಸಂಬಾಳಿಸಿಕೊಳ್ಳಲು ಆಗದ ಮಹಿಳೆಯರು ಲೇಖಣಿ ಹಿಡಿಯುತ್ತಾರೆ ಎಂಬ ಅವರ ಗ್ರಹಿಕೆ ಆಪಾತತಹ ಸಂಕುಚಿತವಾದದ್ದು. ಈ ನಿಲುವು ಅಮಾನವೀಯವಾದದ್ದು.ಪುರುಷನಿಗಷ್ಟೇ ಸಾಹಿತ್ಯ ಕ್ಷೇತ್ರ ಮೀಸಲು ಎಂಬ ಹಮ್ಮು ಬಿಮ್ಮು ನೈಪಾಲರ ಮಾತುಗಳಲ್ಲಿ ಹೊಮ್ಮಿದೆ, ಜಗತ್ತಿನ ಎಲ್ಲ ಭಾಷೆಗಳ ಲೇಖಕಿಯರ ಸಾಹಿತ್ಯ ಸೃಷ್ಟಿಯನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರಂತೆ ಸಾಧಾರಣೀಕರಿಸಿ, ಸಾರಾಸಗಟಾಗಿ `ಲೇಖಕಿಯರ ಬರೆಹ ಜಳ್ಳು~ ಎಂದು ಗುಡಿಸಿ ಹಾಕಿರುವುದು ನೈಪಾಲರು ಪೂರ್ವಗ್ರಹ ಪೀಡಿತರೆಂಬುದನ್ನು ಸಾಬೀತುಪಡಿಸುತ್ತದೆ.

 

ನೊಬೆಲ್ ಪ್ರಶಸ್ತಿ ಪುರಸ್ಕಾರ ಪಡೆದವರು ಕೂಡ ಎಲ್ಲ ಬಲ್ಲವರಲ್ಲ ಮತ್ತು ಪೂರ್ವಗ್ರಹ ಮೊದಲಾದ ಮಿತಿಗಳನ್ನು ಗೆದ್ದವರಲ್ಲ ಎಂಬುದನ್ನು ನೈಪಾಲರು ತಮ್ಮ ಹೇಳಿಕೆಯಿಂದ ದೃಢೀಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry