ಶನಿವಾರ, ಮೇ 15, 2021
24 °C

ನೈರೋಬಿಯಲ್ಲಿ ತೈಲ ಕೊಳವೆ ಸ್ಫೋಟ :ನೂರಕ್ಕೂ ಹೆಚ್ಚು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೈರೋಬಿ, (ಎಎಫ್‌ಪಿ): ಕೀನ್ಯಾದ ರಾಜಧಾನಿ ನೈರೋಬಿಯಲ್ಲಿಯ ಕೊಳೆಗೇರಿಯಲ್ಲಿ ಹಾದುಹೋಗಿರುವ ತೈಲ ಕೊಳವೆ ಮಾರ್ಗದಲ್ಲಿ  ಸೋಮವಾರ ಸಂಭವಿಸಿದ ಸ್ಫೋಟದಲ್ಲಿ 120 ಮಂದಿ ಸಜೀವ ದಹನಗೊಂಡಿದ್ದಾರೆ.ಲುಂಗಾ ಲುಂಗಾ ಕೈಗಾರಿಕಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು,  ಜನದಟ್ಟಣೆಯಿಂದ ಕೂಡಿದ ವಸತಿ ಪ್ರದೇಶಗಳಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.ಕೊಳವೆ ಮಾರ್ಗದಲ್ಲಿ ತೈಲ ಸೋರಿಕೆ ಉಂಟಾಗುತ್ತಿತ್ತು. ಜನರು ಈ ತೈಲವನ್ನು ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಭಾರಿ ಸ್ಫೋಟ ಸಂಭವಿಸಿತು. ಅದರ ಬೆನ್ನಲ್ಲಿಯೇ ಬೆಂಕಿಯ ಜ್ವಾಲೆ  ಮತ್ತು ಹೊಗೆ ಕಾಣಿಸಿಕೊಂಡಿತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.ಸುದ್ದಿ ತಿಳಿದ ಕೂಡಲೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳವು ಬೆಂಕಿಆರಿಸಲು ಪ್ರಯತ್ನಿಸುತ್ತಿದೆ.   2009ರಲ್ಲಿ ಇದೇ ರೀತಿ ತೈಲ ಸೋರಿಕೆ ಉಂಟಾಗಿ ಸ್ಫೋಟ ಸಂಭವಿಸಿದ್ದರಿಂದ 122 ಜನರು ಸತ್ತಿದ್ದರು.

 ಫ್ರಾನ್ಸ್ ಅಣುಶಕ್ತಿ ಸ್ಥಾವರದಲ್ಲಿ ಸ್ಫೋಟ

ಪ್ಯಾರಿಸ್(ಎಪಿ):
ದಕ್ಷಿಣ ಫ್ರಾನ್ಸ್‌ನ ಮಾರ್ಕೌಲ್ ಅಣುಶಕ್ತಿ ಸ್ಥಾವರದಲ್ಲಿ ಸೋಮವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದೆ. ಸದ್ಯಕ್ಕೆ ವಿಕಿರಣ ಸೋರಿಕೆಯ ವರದಿಯಾಗಿಲ್ಲ.ಈವರೆಗೆ ಹಾನಿಯ ಪ್ರಮಾಣ ಮತ್ತು ಇನ್ನಿತರ ವಿವರಗಳು ಲಭ್ಯವಾಗಿಲ್ಲವಾದರೂ ಸ್ಫೋಟ ಸಂಭವಿಸಿರುವುದನ್ನು ಅಣುಶಕ್ತಿ ಸುರಕ್ಷತಾ ಸಂಸ್ಥೆಯ ಎವಾಂಜೆಲ್ ಪೆಟಿಟ್ ದೃಢಪಡಿಸಿದ್ದಾರೆ. ಹೆಚ್ಚಿನ ವಿವರ ನೀಡಲು ಅವರು ನಿರಾಕರಿಸಿದ್ದಾರೆ.ದೈತ್ಯಾಕಾರದ ಒಲೆಯೊಂದು ಸ್ಫೋಟಿಸಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಚಿಕ್ಕಪುಟ್ಟ ಗಾಯಗಳಾಗಿರುವ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಪತ್ರಿಕೆಯೊಂದು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.ವಿಕಿರಣ ಸೋರಿಕೆಯಾಗದ ಕಾರಣ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವ ಸೂಚನೆ ನೀಡಿಲ್ಲ. ಈ ಘಟಕದಲ್ಲಿ ವಿಕಿರಣ ತ್ಯಾಜ್ಯಗಳ ಸಂಸ್ಕರಿಸಲಾಗುತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.