ನೈರ್ಮಲ್ಯ: ಪಾಲಿಕೆ ಆಯುಕ್ತರಿಗೆ ಸಚಿವರ ತರಾಟೆ

ಶನಿವಾರ, ಮೇ 25, 2019
28 °C

ನೈರ್ಮಲ್ಯ: ಪಾಲಿಕೆ ಆಯುಕ್ತರಿಗೆ ಸಚಿವರ ತರಾಟೆ

Published:
Updated:

ಗುಲ್ಬರ್ಗ: ನಗರಾಭಿವೃದ್ಧಿ ಹಾಗೂ ಕಾನೂನು ಸಚಿವ ಸುರೇಶ ಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಅವರು ಬುಧವಾರ ನಗರದ ವಿವಿಧ ಬಡಾವಣೆಗೆ ಭೇಟಿ ನೀಡಿದರು.ನಗರದ ಲಾಲಗೇರಿ ಕ್ರಾಸ್, ಶಿವಾಜಿ ನಗರ, ಆಳಂದ ನಾಕಾ, ಶಿವಶಕ್ತಿ ನಗರ ಮತ್ತು ವಡ್ಡರಗಲ್ಲಿ ಸೇರಿದಂತೆ ಮತ್ತಿತರ ಕಡೆ ಸಂಚರಿಸಿ ನೈರ್ಮಲ್ಯ ವೀಕ್ಷಿಸಿದರು.ರಸ್ತೆ ಮೇಲೆ ಹರಿಯುವ ಚರಂಡಿ ನೀರು, ವಿಲೇವಾರಿಯಾಗದ ಕಸ, ತುಂಬಿ ತುಳುಕಾಡುತ್ತಿದ್ದ ಕಸದ ತೊಟ್ಟಿಯ ದರ್ಶನ ಪಡೆದ ಸಚಿವದ್ವಯರು ಸ್ಥಳದಲ್ಲಿ ಹಾಜರಿದ್ದ ಪಾಲಿಕೆ ಆಯುಕ್ತರು ಸಮರ್ಥವಾಗಿ ಕಾರ್ಯ ನಿರ್ವಹಿಸದಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಶಿವಶಕ್ತಿ ನಗರದಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದ ಚರಂಡಿ ನೀರಿನ ಸಾಕ್ಷಾತ್ ದರ್ಶನ ಪಡೆದ ಸಚಿವರು, ಕೂಡಲೇ ಸ್ವಚ್ಛತೆ ಕೈಗೊಳ್ಳುವಂತೆ ಸೂಚಿಸಿದರು. ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಗರದ ವಿವಿಧೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಕಸದ ರಾಶಿ, ರಸ್ತೆ ಮೇಲೆಯೇ ಹರಿಯುತ್ತಿದ್ದ ನೀರು, ಮಂದಗತಿಯಲ್ಲಿ ಸಾಗಿದ ರಸ್ತೆ ವಿಸ್ತರಣೆ ಕಾಮಗಾರಿ ವೀಕ್ಷಿಸಿದ ಸಚಿವರು, ಆದಷ್ಟು ಬೇಗನೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.  ಶಾಸಕರಾದ ಶಶೀಲ ಜಿ. ನಮೋಶಿ, ಅಮರನಾಥ ಪಾಟೀಲ, ಪಾಲಿಕೆ ಆಯುಕ್ತ ಸಿ. ನಾಗಯ್ಯ, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಜೊತೆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry