ಮಂಗಳವಾರ, ಮೇ 11, 2021
26 °C
ತಾಲ್ಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ

ನೈಸರ್ಗಿಕ ಸಂಪನ್ಮೂಲ ಉಳಿಸಿ: ಪುಟ್ಟತಾಯಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಮುಂದಿನ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲವನ್ನು ಉಳಿಸಿಕೊಡಬೇಕಾದ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದಿನಿಂದಲೇ ಈ ನಿಟ್ಟಿನಲ್ಲಿ ಎಲ್ಲರು ಪ್ರಯತ್ನಿಸೋಣ ಎಂದು ತಾಲ್ಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಎಂ. ಪುಟ್ಟತಾಯಮ್ಮ ಕರೆ ನೀಡಿದರು.ತಾಲ್ಲೂಕಿನ ಹಂಗಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಿಸಿದ್ದ  ಗುಂಡ್ಲುಪಂಡಿತ ರಾಜರತ್ನಂ ವೇದಿಕೆಯಲ್ಲಿ ಶುಕ್ರವಾರ ನಡೆದ ತಾಲ್ಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಪ್ರಾಕೃತಿಕ ಸಂಪನ್ಮೂಲ ಉಳಿಸುವುದು ಅನಿವಾರ್ಯವಾಗಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ, ಜನರು ಪರಿತಪಿಸುತ್ತಿರುವಾಗ ತಮಿಳುನಾಡಿಗೆ ನೀರು ಬಿಟ್ಟಿರುವುದು ಅಸಂಬದ್ಧ ಎಂದು ಅಸಾಮಾಧಾನ ವ್ಯಕ್ತಪಡಿಸಿದರು.ಅಂತರ್ಜಲವೇ ಎಲ್ಲ ನೈಸರ್ಗಿಕ ಸಂಪತ್ತು ಮತ್ತು ಮನುಷ್ಯನಿಗೆ ಆಧಾರ. ಆದರೆ, ಇತ್ತೀಚೆಗೆ ಅಂತರ್ಜಲ ಕುಸಿಯುತ್ತಿರುವುದು ಆತಂಕಕಾರಿ ವಿಷಯ. ಕೊಳವೆಬಾವಿ ಕೊರೆಯಿಸುವುದರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಮೂಲಕ ಅಂತರ್ಜಲ ಮಟ್ಟ ಕಾಪಾಡಬೇಕು. ಶಾಲಾ, ಕಾಲೇಜು ಆವರಣದಲ್ಲಿ, ರಸ್ತೆ ಇಕ್ಕೆಲಗಳಲ್ಲಿ ಸಸಿ ನೆಡುವುದರೊಂದಿಗೆ ಪ್ರಕೃತಿಯ ಸಂಪತ್ತನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ಎಸ್. ನಂಜಪ್ಪ ವಹಿಸಿದ್ದರು.ನಿಕಟಪೂರ್ವ ಸಾಹಿತ್ಯ ಸಮ್ಮೇಳನ ಅದ್ಯಕ್ಷ ಪಿ.ಸಿ. ರಾಜಶೇಖರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ  ಸೌಭಾಗ್ಯ ಶಿವಕುಮಾರ್, ಜಿಲ್ಲಾ ನಿಕಟ ಪೂರ್ವ ಕಸಾಪ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ, ತಾಲ್ಲೂಕು ನಿಕಟ ಪೂರ್ವ ಕಸಾಪ ಅಧ್ಯಕ್ಷ ಜಿ.ಡಿ. ದೊಡ್ಡಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಅಂಬಿಕರಾಜಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶಾರದಮ್ಮ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಜಶೇಖರ್, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಬಿ.ಎಂ. ಬಸಪ್ಪ, ಕೃಷಿಕ ಸಮಾಜದ ಉಪಾಧ್ಯಕ್ಷ ಭಿಕ್ಷೇಶ್ ಪ್ರಸಾದ್, ತಾಲ್ಲೂಕು ಕಸಾಪ ಅಧ್ಯಕ್ಷ ಗವಿಸ್ವಾಮಿ, ಗು.ಚಿ. ರಮೇಶ್, ಹೂರದಹಳ್ಳಿ ಪ್ರಸಾದ್, ಗುಂ.ಪು. ದೇವರಾಜು, ಉದಯ್ ಕುಮಾರ್, ಬ್ರಹ್ಮಾನಂದ್, ಮಹೇಶ್, ವೃಷಬೇಂದ್ರ, ಶ್ರೀಕಂಠಪ್ಪ, ಉಪನ್ಯಾಸಕ ಓಕೆ...`ರಾಜಕಾರಣಿಗಳಿಗೆ ಭಾಷೆ ಬದ್ಧತೆ ಅಗತ್ಯ'

ಗುಂಡ್ಲುಪೇಟೆ: ರಾಜಕಾರಣಿಗಳು ನೆಲ, ಜಲ, ಭಾಷೆ ಬಗ್ಗೆ ಬದ್ಧತೆ ಹೊಂದಿದಾಗ ಮಾತ್ರ ವಿಧಾನಸೌಧದಂತಹ ಶಕ್ತಿಕೇಂದ್ರದಲ್ಲಿ ಅನ್ಯಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ದುರುಳರನ್ನು ಸದೆಬಡಿಯಲು ಸಾಧ್ಯ ಎಂದು ಕವಯತ್ರಿ ಡಾ.ಲತಾರಾಜಶೇಖರ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಹಂಗಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಿಸಿದ್ದ ಗುಂಡ್ಲುಪಂಡಿತ ರಾಜರತ್ನಂ ವೇದಿಕೆಯಲ್ಲಿ ಶುಕ್ರವಾರ ನಡೆದ ತಾಲ್ಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ವಿಧಾನಸೌಧದಲ್ಲಿ ಬೆಳಗಾವಿ ಶಾಸಕರಿಬ್ಬರು ಮರಾಠಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಅಕ್ಷಮ್ಯ ಮತ್ತು ಖಂಡನೀಯ. ಕನ್ನಡಕ್ಕೆ ಮೊದಲ ಆದ್ಯತೆ ಮತ್ತು ಗೌರವ ನೀಡಿಬೇಕು. ಆಡಳಿತದಲ್ಲಿ ಕನ್ನಡ ಬಳಕೆಯನ್ನು ಕಾರ್ಯಗತ ಮಾಡಲು ಶ್ರಮಿಸಬೇಕು ಎಂದು ಒತ್ತಾಯಿಸಿದರು.ಗಡಿನಾಡಿನಲ್ಲಿರುವ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣವಾದ ಸಂಗತಿ. ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಇಂಗ್ಲಿಷ್ ಇನ್ನೂ ಶೈಶಾವಸ್ಥೆಯಲ್ಲಿದ್ದಾಗಲೇ ಕನ್ನಡದಲ್ಲಿ ಮಹಾಕಾವ್ಯಗಳು ರಚನೆಯಾಗಿದ್ದವು. ಪ್ರತಿಯೊಬ್ಬ ಕನ್ನಡಿಗನ ಮೈ, ಮನಸ್ಸು ಮಾತೃಭಾಷೆಗಾಗಿ ಮಿಡಿಯುವಂತಾದಾಗ ಮಾತ್ರ ಭಾಷೆಯ ಉನ್ನತಿ ಸಾಧ್ಯ ಎಂದರು.ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೋಮಶೇಖರ ಬಿಸಲ್ವಾಡಿ, ಕನ್ನಡದ ಸೌಹಾರ್ದತೆ ಮತ್ತು ನೆಲ, ಜಲ ಉಳಿವಿಗೆ ಸಾಹಿತ್ಯ ಸಮ್ಮೇಳನ ಅವಶ್ಯಕ. ಜಿಲ್ಲೆಯ ಎಲ್ಲ 16 ಹೋಬಳಿಗಳಲ್ಲೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಘಟಕಗಳನ್ನು ಆರಂಭಿಸುವುದಾಗಿ ಪ್ರಕಟಿಸಿದರು.`ಜಾನಪದ ಕಥಾ ಸಂಗಮ' ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಮಲೆಯೂರು ಗುರುಸ್ವಾಮಿ, ವಿಜಯನಗರ ಸಾಮ್ರಾಜ್ಯದಿಂದ ಸಂತರು ಮತ್ತು ವಿರಕ್ತರು ಬಂದು ನೆಲೆಸಿದ ನಾಡು ಇದು. `ಪ್ರಜಾವಾಣಿ' ಪತ್ರಿಕೆಯಲ್ಲಿ ಉದ್ಯೋಗಿಯಾಗಿದ್ದ ಖ್ಯಾತ ಸಣ್ಣಕಥೆಗಾರ ಸು. ರಮಾಕಾಂತ ಅವರು ಹಂಗಳ ಗ್ರಾಮದವರು ಎಂದು ಹೇಳಿ ಸ್ಥಳದ ಇತಿಹಾಸವನ್ನು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ಎಸ್. ನಂಜಪ್ಪ ಮಾತನಾಡಿದರು.

ನಿಕಟಪೂರ್ವ ಸಾಹಿತ್ಯ ಸಮ್ಮೇಳನ ಅದ್ಯಕ್ಷ ಪಿ.ಸಿ. ರಾಜಶೇಖರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ  ಸೌಭಾಗ್ಯ ಶಿವಕುಮಾರ್, ಜಿಲ್ಲಾ ನಿಕಟ ಪೂರ್ವ ಕಸಾಪ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ, ತಾಲ್ಲೂಕು ನಿಕಟ ಪೂರ್ವ ಕಸಾಪ ಅಧ್ಯಕ್ಷ ಜಿ.ಡಿ. ದೊಡ್ಡಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಅಂಬಿಕರಾಜಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶಾರದಮ್ಮ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಜಶೇಖರ್, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಬಿ.ಎಂ. ಬಸಪ್ಪ, ಕೃಷಿಕ ಸಮಾಜದ ಉಪಾಧ್ಯಕ್ಷ ಭಿಕ್ಷೇಶ್ ಪ್ರಸಾದ್ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.