ನೈಸರ್ಗಿಕ ಸಂಪನ್ಮೂಲ ದುರ್ಬಳಕೆ ಆಗದಿರಲಿ

7

ನೈಸರ್ಗಿಕ ಸಂಪನ್ಮೂಲ ದುರ್ಬಳಕೆ ಆಗದಿರಲಿ

Published:
Updated:

ನೂತನ ಪಿಯು ಕಾಲೇಜು ಉದ್ಘಾಟನೆ, ಭೂಮಿಪೂಜೆ

ಹಾನಗಲ್:
`ಪ್ರಕೃತಿ ಮುನಿಸಿ ಕೊಂಡಾಗ ಕಳವಳಗೊಂಡು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುವುದಕ್ಕಿಂತ ನೈಸರ್ಗಿಕ ಸಂಪನ್ಮೂಲಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಯೋಜನೆಗಳು ಭವಿಷ್ಯದ ದೃಷ್ಠಿಯಿಂದ ಅವಶ್ಯವಾ ಗಿದ್ದು, ಈ ಹಿನ್ನೆಲೆಯಲ್ಲಿ ನೀರು ಸಮ ರ್ಪಕ ಬಳಕೆಯ ಉದ್ದೇಶದಿಂದ ತಾಲ್ಲೂ ಕಿನಲ್ಲಿರುವ ಧರ್ಮಾ ಕಾಲುವೆಯ ನೀರನ್ನು ಹನಿ ನೀರಾವರಿ ವ್ಯವಸ್ಥೆಯ ಮೂಲಕ ಬಳಸುವ ಯೋಚನೆ ಹಮ್ಮಿ ಕೊಳ್ಳಲಾಗಿದೆ~ ಎಂದು ಸಚಿವ ಸಿ.ಎಂ. ಉದಾಸಿ ಹೇಳಿದರು. ತಾಲ್ಲೂಕಿನ ಆಡೂರಿನಲ್ಲಿ ಭಾನುವಾರ ರೂ. 1.19 ಕೋಟಿ ವೆಚ್ಚದ ಸರಕಾರಿ ಪಿಯು ಕಾಲೇಜ್ ಕಟ್ಟಡದ ಉದ್ಘಾ ಟನೆ ಮತ್ತು ರೂ. 18 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪಂಚಾಯತಿ ಕಟ್ಟಡದ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು. `ಶಿಕ್ಷಣದಿಂದ ಆರ್ಥಿಕ ವಿಕಾಸಕ್ಕೆ ಮಾರ್ಗವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯ ಒದಗಿಸುತ್ತಿದೆ. ಬಡವರ ಮಕ್ಕಳು ಇಂದು ಉನ್ನತ ವ್ಯಾಸಂಗ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಎಂಜನಿಯರಿಂಗ್, ಮೆಡಿಕಲ್, ಕೃಷಿ ಕಾಲೇಜು ಮತ್ತೀತರ ಸಂಸ್ಥೆ ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಲಾಗಿದೆ. ಇದಲ್ಲದೆ ರೈತರ ಆರ್ಥಿಕ ಸಭಲತೆಗೆ ಕಾರಣವಾಗುವ ಹಲವಾರು ನೀರಾವರಿ ಯೋಜನೆಗಳು ಜಿಲ್ಲೆಯಲ್ಲಿ ಸಾಕಾರಗೊಂಡಿವೆ. ಅವು ಗಳಲ್ಲಿ ಶಿಗ್ಗಾವಿ ತುಂತುರು ಹನಿ ನೀರಾ ವರಿ ಮತ್ತು ತುಂಗಾ ಮೇಲ್ದಂಡೆ ಯೋಜನೆ ಮತ್ತು ಬಾಂದಾರಗಳು ಪ್ರಮುಖವಾದವು~ ಎಂದರು.ಗ್ರಾಪಂ ಅಧ್ಯಕ್ಷ ಮಾರುತಿ ನಿಕ್ಕಂ ಅಧ್ಯ ಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಸದಸ್ಯ ಪದ್ಮನಾಭ ಕುಂದಾಪೂರ, ತಾಪಂ ಅಧ್ಯಕ್ಷೆ ಲಲಿತವ್ವ ಹಿರೇಮಠ, ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಸದಸ್ಯೆ ಅನಿತಾ ಶಿವೂರ,  ಡಾ.ಕೆ.ಎಸ್.ಕುಲಕರ್ಣಿ, ಎಂ.ಬಿ. ಕಲಾಲ, ಕಲ್ಯಾಣಕುಮಾರ ಶೆಟ್ಟರ, ಎಂ.ಆರ್. ಪಾಟೀಲ, ರವಿ ಬೆಲ್ಲದ, ನಿಂಗಪ್ಪ ಪೂಜಾರ, ರಾಜಣ್ಣ ಗೌಳಿ, ಬಸಣ್ಣ ಸಂಶಿ, ಭರಮಣ್ಣ ಶಿವೂರ, ಎಸ್.ಎಸ್. ಮಾಳಗಿ, ನಿಂಗಪ್ಪ ಕೊಪ್ಪದ, ಬಸವ ರಾಜ ಬೆಂಚಳ್ಳಿ, ನಾಗಪ್ಪ ಪಿಳ್ಳಿಗಟ್ಟಿ, ಎಂಜನಿಯರ್ ಬಿ.ವೈ.ಬಂಡಿವಡ್ಡರ ಮುಂತಾದವರು ವೇದಿಕೆಯಲ್ಲಿದ್ದರು. ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ ಸ್ವಾಗತಿಸಿ ದರು. ಅಶೋಕ ತೋಟದ ನಿರೂಪಿಸಿದರು.`ಅಂಗನವಾಡಿಗಳ ಪಾತ್ರ ಮಹತ್ತರ~

ಹಾನಗಲ್: `
ಮಕ್ಕಳ ಬೆಳವಣಿಗೆಯ ಆರಂಭದ ಹಂತದಲ್ಲಿ ಶೈಕ್ಷಣಿಕ ಮನ  ಸ್ಥಿತಿಯನ್ನು ಮೂಡಿಸುವಲ್ಲಿ ಅಂಗನ ವಾಡಿ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ~ ಎಂದು   ಸಚಿವ ಸಿ.ಎಂ. ಉದಾಸಿ ಅಭಿಪ್ರಾಯಪಟ್ಟರು. ಭಾನುವಾರ ಹಾನಗಲ್ಲಿನಲ್ಲಿ ರೂ. 2.6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳ ಲಿರುವ ಮೆಟ್ರಿಕ್ ನಂತರದ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದ ಅಡಿ ಗಲ್ಲು ಮತ್ತು ರೂ. 50 ಲಕ್ಷದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರತಿಯೊಂದು ಅಂಗನವಾಡಿ ಕೇಂದ್ರ ಗಳಿಗೆ ಸ್ವಂತ ಕಟ್ಟಡ ಬೇಕು. ಅಲ್ಲದೆ, ಇನ್ನುಳಿದ ಮೂಲಸೌಕರ್ಯಗಳು ದೊರಕಿದಾಗ ಪೂರ್ವ ಪ್ರಾಥಮಿಕ ಶಿಕ್ಷಣದ ಆಶಯ ಸಾಕಾರಗೊಳ್ಳಲು ಸಾಧ್ಯವಿದೆ ಎಂದರು.ಇದೇ ಸಂದರ್ಭದಲ್ಲಿ ಸಚಿವ ಸಿ.ಎಂ. ಉದಾಸಿ ದಂಪತಿಯನ್ನು ಶಿಶು ಅಭಿ ವೃದ್ಧಿ ಯೋಜನೆ ಇಲಾಖೆಯ ಸಿಬ್ಬಂದಿ ಗೌರವಿಸಿದರು.ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಹಸೀನಾ ನಾಯ್ಕನವರ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸ ಖಾನಿ, ಸದಸ್ಯ ಪದ್ಮನಾಭ ಕುಂದಾಪುರ, ತಾಪಂ ಅಧ್ಯಕ್ಷೆ ಲಲಿತವ್ವ ಹಿರೇಮಠ, ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಸದಸ್ಯರಾದ ವಿಜಯಾ ಹಿರೇಮಠ, ಅನಿತಾ ಶಿವೂರ, ಸುಮಂಗಲಾ ದೊಡ್ಡ ಮನಿ, ಮಂಜುಳಾ ಯತ್ನಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸಿ.ಎಸ್.ಹೊಳಿ ಹೊಸೂರ, ಕೆ.ಎಚ್.ವಿಜಯಕುಮಾರ, ಶಿಶು ಅಭಿವೃದ್ಧಿ ಅಧಿಕಾರಿಗಳಾದ ಡಿ.ಎಚ್. ಲಲಿತಾ, ಶಿರೋಳಕರ, ಪಿಡಬ್ಲುಡಿ ಎಂಜಿನಿಯರ್ ಕೆ.ಶಿವಣ್ಣ ಮತ್ತು ಬಿ.ವೈ.ಬಂಡಿವಡ್ಡರ ಉಪಸ್ಥಿತ ರಿದ್ದರು. ಹಾನಗಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಆರ್.ಶೆಟ್ಟರ ಸ್ವಾಗತಿಸಿದರು. ಶಿವಲೀಲಾ ಕ್ಯಾಡಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry