ಸೋಮವಾರ, ಮೇ 17, 2021
31 °C

ನೈಸ್ ರಸ್ತೆಯಲ್ಲಿ ಮೈಲಿಗಲ್ಲೇ ಇಲ್ಲ

-ರಮಣ ಗೋಕುಲ Updated:

ಅಕ್ಷರ ಗಾತ್ರ : | |

`ನೈಸ್' ರಸ್ತೆಗಳಿಂದಾಗಿ ನಗರದ ವಾಹನ ಸಂಚಾರ ದಟಟ್ಟಣೆ ಸಾಕಷ್ಟು ಕಡಿಮೆಯಾಗಿರುವುದೇನೋ ನಿಜ. ಆ ರಸ್ತೆಗಳ ಮೇಲಿನ ಪ್ರಯಾಣ ಸರಾಗ ಎಂಬುದರಲ್ಲೂ ಅನುಮಾನವಿಲ್ಲ. ಪ್ರಯಾಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೊಡ್ಡ ಮೊತ್ತದ ಶುಲ್ಕವನ್ನೂ `ನೈಸ್' ರಸ್ತೆ ಬಳಕೆದಾರರ ಮೇಲೆ ವಿಧಿಸಲಾಗುತ್ತಿದೆ. ಪಡೆದ ಶುಲ್ಕಕ್ಕೆ ರಶೀತಿಯನ್ನೇನೋ ಕೊಡುತ್ತಾರೆ. ಆದರೆ ಅದರ ಮೇಲೆ ಪ್ರಯಾಣ ಮಾಡುವ ದೂರ ಎಷ್ಟು ಎಂಬುದು ನಮೂದಾಗಿರುವುದಿಲ್ಲ. ನೈಸ್ ರಸ್ತೆ ನೋಡಲು ಏಕಪ್ರಕಾರವಾಗಿರುತ್ತದೆ.ಒಂದು ವೇಳೆ ವಾಹನ ಕೆಟ್ಟರೆ, ಎಷ್ಟು ದೂರದಲ್ಲಿ ನಿಂತಿದ್ದೇವೆ ಎಂಬುದನ್ನು ಹೇಳುವುದೂ ಕಷ್ಟವಾಗುತ್ತದೆ. ಅಲ್ಲಲ್ಲಿ ಮೈಲಿಗಲ್ಲು ನೆಡಬೇಕೆಂಬ ನಿಯಮ `ನೈಸ್ ರಸ್ತೆ'ಗೆ ಮಾತ್ರ ಯಾಕೆ ಅನ್ವಯಿಸುವುದಿಲ್ಲ? ರಸ್ತೆ ಯಾವ್ಯಾವ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಎಂಬುದನ್ನು ನಮೂದಿಸಿರುವ ಬೋರ್ಡ್‌ನಲ್ಲೂ ಆ ಪ್ರದೇಶಗಳು ಎಷ್ಟು ದೂರದಲ್ಲಿವೆ ಎಂಬ ಉಲ್ಲೇಖವಿಲ್ಲ. ಈ ಕುರಿತು `ನೈಸ್ ರಸ್ತೆ' ನಿರ್ವಹಣೆ ಮಾಡುತ್ತಿರುವವರು ಗಮನ ಹರಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.