ಸೋಮವಾರ, ಅಕ್ಟೋಬರ್ 21, 2019
26 °C

ನೈಸ್ ರಸ್ತೆ: ಪರಿಷ್ಕೃತ ಟೋಲ್ ದರ ಜಾರಿ

Published:
Updated:

ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (ನೈಸ್) ಕಂಪೆನಿಯು ಬೆಂಗಳೂರು ಮತ್ತು ಮೈಸೂರು ಕಾರಿಡಾರ್ ರಸ್ತೆಯ ಪರಿಷ್ಕೃತ  ಟೋಲ್‌ದರ ಪಟ್ಟಿಯನ್ನು ಪ್ರಕಟಿಸಿದೆ.ಟೋಲ್‌ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಪರಿಷ್ಕೃತ ದರವು ಜನವರಿ 1 ರಿಂದಲೇ ಜಾರಿಯಾಗಿದೆ.ರಾಜ್ಯ ಸರ್ಕಾರವು ಟೋಲ್ ಪರಿಷ್ಕರಣೆ ಬಗ್ಗೆ 2011ರ ಫೆಬ್ರವರಿ 5ರ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು ಎಂದು ನೈಸ್ ಕಂಪೆನಿಯು ಪ್ರಕಟಣೆಯಲ್ಲಿ ತಿಳಿಸಿದೆ.`ಪ್ರಯಾಣಿಕ ಸ್ನೇಹಿ ನೀತಿಯನ್ನು ಈ ವರ್ಷವು ಮುಂದುವರೆಸಿದ್ದು ಪರಿಷ್ಕೃತ ದರಗಳು ಪ್ರಯಾಣಿಕರಿಗೆ ಹೆಚ್ಚು ಹೊರೆಯಾಗುವುದಿಲ್ಲ~ ಎಂದು ನೈಸ್ ಕಂಪೆನಿಯು ಅಭಿಪ್ರಾಯಪಟ್ಟಿದೆ.

 ನೈಸ್ ರಸ್ತೆಯ ಟೋಲ್ ಪರಿಷ್ಕೃತ ದರ 

Post Comments (+)