`ನೈಸ್' ವ್ಯವಹಾರ- ಉನ್ನತ ತನಿಖೆಗೆ ದೇವೇಗೌಡ ಆಗ್ರಹ

7

`ನೈಸ್' ವ್ಯವಹಾರ- ಉನ್ನತ ತನಿಖೆಗೆ ದೇವೇಗೌಡ ಆಗ್ರಹ

Published:
Updated:

ನವದೆಹಲಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಯೋಜನೆ ಕಾರ್ಯಗತಗೊಳಿಸುತ್ತಿರುವ `ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್' (ನೈಸ್) ವ್ಯವಹಾರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಸದಸ್ಯ ಎಚ್.ಡಿ. ದೇವೇಗೌಡ ಅವರು ಲೋಕಸಭೆಯಲ್ಲಿ ಬುಧವಾರ ಆಗ್ರಹಿಸಿದ್ದಾರೆ.`ಕಂಪೆನಿ ವ್ಯವಹಾರ ಕಾನೂನು ತಿದ್ದುಪಡಿ ಮಸೂದೆ' ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ ದೇವೇಗೌಡರು, ನೈಸ್ ಎಕರೆಗೆ ರೂ. 10ರಂತೆ ಭಾರಿ ಪ್ರಮಾಣದ ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದು, ಹೆಚ್ಚಿನ ದರಕ್ಕೆ ಬ್ಯಾಂಕುಗಳಿಗೆ ಒತ್ತೆ ಇಟ್ಟಿದೆ. ಈಗ ಮತ್ತೊಂದು ಕಂಪೆನಿ ಜತೆ ಎಂಟು ಸಾವಿರ ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು.ನೈಸ್ ಹತ್ತು ರೂಪಾಯಿಗೆ ಗುತ್ತಿಗೆ ಪಡೆದ ಎಕರೆ ಭೂಮಿಯನ್ನು ಅಜ್ಮೀರ್ ಮೂಲದ ಕಂಪೆನಿಗೆ ನಾಲ್ಕು ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ. ಈ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಸಿಬಿಐ ಅಥವಾ ಮತ್ಯಾವುದಾದರೂ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಮೊದಲ ಹಂತದ ಹೆದ್ದಾರಿ ಯೋಜನೆಗೆ ರಾಜ್ಯ ಸರ್ಕಾರ ಬೆಂಗಳೂರು ಸುತ್ತಮುತ್ತ 1839 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಈ ಸಂಗತಿಯನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ. ಈ ಭೂಮಿ ಬಡ ರೈತರಿಗೆ ಸೇರಿದ್ದು, ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry