ನೈಸ್ ಹೋರಾಟಗಾರನ ಕೊಲೆ

7

ನೈಸ್ ಹೋರಾಟಗಾರನ ಕೊಲೆ

Published:
Updated:

ರಾಮನಗರ: ನೈಸ್ ಕಂಪೆನಿ ಬಿಎಂಐಸಿ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಸೋಮಪುರದ ನಿವಾಸಿ ಸಿದ್ದಲಿಂಗಪ್ರಭು (38) ಎಂಬಾತ ಕೊಲೆಯಾಗಿರುವ ಪ್ರಕರಣ ಮಂಗಳವಾರ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸೋಮವಾರ ರಾತ್ರಿ ಕೆಲ ದುಷ್ಕರ್ಮಿಗಳು ಲಾಂಗ್‌ನಿಂದ ಹೊಡೆದು ಸಿದ್ದಲಿಂಗಪ್ರಭುವನ್ನು ಕೊಂದು ಪರಾರಿಯಾಗಿದ್ದಾರೆ. ಈ ಕುರಿತು ಸಿದ್ದಲಿಂಗಪ್ರಭುವಿನ ಸಂಬಂಧಿ ಬಸಪ್ಪ ಎಂಬಾತರು ಠಾಣೆಯಲ್ಲಿ ದೂರು ನೀಡಿದ್ದಾರೆ. ನೈಸ್ ಕಂಪೆನಿಯ ಮುಖ್ಯಸ್ಥ ಅಶೋಕ ಖೇಣಿ ಹಾಗೂ ಬಿಜೆಪಿ ಮುಖಂಡ ರುದ್ರೇಶ್ ಅವರು ಈ ಕೊಲೆ ಮಾಡಿಸಿರುವ ಸಾಧ್ಯತೆ ಇದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry