`ನೊಂದವರಿಗೆ ದನಿಯಾಗಿದ್ದ ಬಸವರಾಜ ಕಟ್ಟೀಮನಿ'

7

`ನೊಂದವರಿಗೆ ದನಿಯಾಗಿದ್ದ ಬಸವರಾಜ ಕಟ್ಟೀಮನಿ'

Published:
Updated:

ರಾಮನಗರ: `ನೊಂದವರ ಬದುಕಿನ ಚಿತ್ರಣವನ್ನು ತಮ್ಮ ಸಾಹಿತ್ಯ ಮೂಲಕ ತೆರೆದು ಅವರಿಗೆ ನ್ಯಾಯ ಒದಗಿಸಲು ಸಾಹಿತಿ ಬಸವರಾಜ ಕಟ್ಟೀಮನಿ ತಮ್ಮ ಜೀವನದುದ್ದಕ್ಕೂ ಹೋರಾಡಿದ ಧೀಮಂತ' ಎಂದು ದೊಡ್ಡಬಳ್ಳಾಪುರ ಕೊಂಗಾಡಿಯಪ್ಪ ಕಾಲೇಜಿನ ಕನ್ನಡ ವಿಬಾಗದ ಮುಖ್ಯಸ್ಥ ಪ್ರೊ.ಚಂದ್ರಪ್ಪ ತಿಳಿಸಿದರು.ಜಿಲ್ಲೆಯ ಕನಕಪುರದ ಪುರಸಭಾ ಮೈದಾನದಲ್ಲಿ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಸವರಾಜ ಕಟ್ಟೀಮನಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಬಸವರಾಜ ಕಟ್ಟೀಮನಿ ಅವರ ಬದುಕು-ಬರಹ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ನಮ್ಮ ಪರಂಪರೆಯ ನಾಡಿ ಮಿಡಿತಗಳನ್ನು, ಗಟ್ಟಿತನವನ್ನು, ಅರಿಯದೆ ಸಾಹಿತ್ಯವನ್ನು ದೂರವಿಟ್ಟ ಕಾಲಘಟ್ಟದಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಿ ನಿಂತವರು ಬಸವರಾಜ ಕಟ್ಟೀಮನಿ. ಸಾಹಿತ್ಯ ಪ್ರಗತಿ ಪರವಗಿ ಯೋಚಿಸಲು ಅಸ್ತ್ರವಲ್ಲ. ಅದರ ಬಗ್ಗೆ ಮಾತನಾಡುವುದಕ್ಕೆ ಬೇರೆ ಜನ ಇದ್ದಾರೆ ಇದು ಸಾಹಿತಿಗಳ ಕೆಲಸವಲ್ಲ ಎಂದು 1940-50ರ ಕಾಲಘಟ್ಟದಲ್ಲಿ ಯೋಚಿಸುತ್ತಿದ್ದ ದಿನಗಳಲ್ಲಿ ಸಾಹಿತ್ಯವನ್ನು ಪ್ರಗತಿಯ ಅಸ್ತ್ರವಾಗಿಬಳಸಿದವರು ಕಟ್ಟೀಮನಿ' ಎಂದು ತಿಳಿಸಿದರು.ಉಪನ್ಯಾಸಕ ಪ್ರಭು ವಿ. ಪಾಟೀಲ್ ಮಾತನಾಡಿ, `ಕಟ್ಟೀಮನಿ ಹುಟ್ಟು ಹೋರಾಟಗಾರಾಗಿದ್ದು ಎಲ್ಲ ಕ್ಷೇತ್ರದಲ್ಲೂ ಕೆಲಸ ಮಾಡುವ ಮೂಲಕ ಬಡವರ ಪರ ಚಿಂತನೆ ಮಾಡುತ್ತಿದ್ದರು. ಬಡವರಿಗೆ ಅನ್ಯಾಯವಾದಾಗ ಯಾವುದೇ ಮುಲಾಜಿಲ್ಲದೆ ಅವರ ಪರ ನಿಂತು ಯಾವುದೆ ತಾಗ್ಯಕ್ಕೆ ಸಿದ್ಧರಾಗುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ದೀನ ದಲಿತ, ಕಾರ್ಮಿಕರ ಪರವಾಗಿ ಸಾಮಾಜಿಕ ಕಳಕಳಿಯಿಟ್ಟುಕೊಂಡು ಹಲವು ಕಥೆ, ಕಾದಂಬರಿ ಬರೆವಣಿಗೆ ಮೂಲಕ ನಾಯ್ಯ ಒದಗಿಸಿದ್ದಾರೆ' ಎಂದು ತಿಳಿಸಿದರು.ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ನಾಗೇಶ್, ಕೋಶಾಧ್ಯಕ್ಷ ಮಹೇಶ್, ಕನಕಪುರ ತಾಲ್ಲೂಕು ಘಟಕದ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ, ಜಿಲ್ಲಾ ಗೌರವ ಕಾರ್ಯದರ್ಶಿ, ಸಿ. ರಾಜಶೇಖರ್, ವೃಷಬೇಂದ್ರಮೂರ್ತಿ, ಶಿವರಾಜೇಗೌಡ, ಕೋಶಾಧ್ಯಕ್ಷ  ಮುನಿಯಪ್ಪ, ಸರಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ. ಚಂದ್ರು, ಉಪಾಧ್ಯಕ್ಷ ಆರ್.ವಿ. ನಾರಾಯಣ್ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry