`ನೊಂದವರ ದನಿಯಾಗಿ'

7

`ನೊಂದವರ ದನಿಯಾಗಿ'

Published:
Updated:

ಸೊರಬ: ಪದಾಧಿಕಾರಿಗಳು ನೊಂದವರ ದನಿಯಾಗಿ, ಶೋಷಿತರ ಪರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಚಾಲಕ ಸತ್ಯ ಭದ್ರಾವತಿ ಕರೆ ನೀಡಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ನೊಂದಂತಹ ರಾಜ್ಯದಲ್ಲಿನ ಪ್ರತಿಯೊಬ್ಬ ಕೆಳ ಸಮುದಾಯದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತ ಒಳಗೊಂಡ ದಲಿತ ಸಂಘರ್ಷ ಸಮಿತಿಯನ್ನು ರಾಜ್ಯದಲ್ಲಿ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿಸಿದರು ಎಂದರು.ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ಹಿಂದುಳಿದವರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವುದು ದಲಿತ ಸಂಘರ್ಷ ಸಮಿತಿ ಮಾತ್ರ. ಜನರು ಕುಡಿತಕ್ಕೆ ವೆಚ್ಚ ಮಾಡುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಕುಟುಂಬ ನಿರ್ವಹಣೆಗೆ ವಿನಿಯೋಗಿಸಿದರೆ ಸಮಾಜದಲ್ಲಿ ಮುಂದೆ ಬರಬಹುದು ಎಂದರು.ಜಿಲ್ಲಾ ಸಂಘಟನಾ ಸಂಚಾಲಕ ಗುರುರಾಜ್, ಪ್ರಕಾಶ್ ಲಿಗಾಡಿಯ, ಕೆ.ಎ. ರಾಜಕುಮಾರ್, ಎ.ಡಿ. ನಾಗಪ್ಪ, ಬಂಗಾರಪ್ಪ ನಿಟ್ಟಕ್ಕಿ, ರಾಜೇಂದ್ರ ಮೇಸ್ತ್ರಿ ಹಾಜರಿದ್ದರು.ಪದಾಧಿಕಾರಿಗಳು: ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕರಾಗಿ ಬಿ. ನಿಟ್ಟಕ್ಕಿ, ಸಂಘಟನಾ ಸಂಚಾಲಕರಾಗಿ ಪ್ರಕಾಶ್ ಮಲ್ಲಾಪುರ, ರೇವಣಪ್ಪ ಹಿರೇಚೌಟಿ, ಪರಮೇಶ್ವರ ಕೋಲ್ಗುಣಸಿ, ವೀರಭದ್ರ ತಾಳಗುಪ್ಪ, ನಾಗರಾಜ ಹುರುಳಿಕೊಪ್ಪ, ಮಹೇಶ ಶಕುನವಳ್ಳಿ, ಚಂದ್ರಪ್ಪ ತುಡ್ನೂರು, ವಿನಾಯಕ ಕಾನಡೆ ಹೆಚ್ಚೆ, ರುದ್ರಪ್ಪ ಭೈರೇಕೊಪ್ಪ, ಅಣ್ಣಪ್ಪ ಬೊಮ್ನಳ್ಳಿ. ಖಜಾಂಚಿಯಾಗಿ ಡಿ.ಬಿ. ಶುಭಕರ, ಸಂಚಾಲಕರಾಗಿ ಜನಾರ್ಧನ, ಮಹಿಳಾ ಸಂಚಾಲಕಿಯಾಗಿ ಚಂದ್ರಕಲಾ ನೇರಲಗಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಶ್ವನಾಥ ಕಾನಡೆ, ಗಂಗಾಧರ ಹೊಳೆಮರೂರು, ಉಮೇಶ ಬಾಸೂರು, ರಾಜು ಮಲ್ಲಾಪುರ, ಶಿವಪ್ಪ, ಸುಂಕಪ್ಪ, ಜಗದೀಶ, ರಾಜು ಸಾಬಾರ, ಚನ್ನಬಸಪ್ಪಗೌಡ ತುಡ್ನೂರು, ಭಾಷಾಸಾಬ್ ತಲಗಡ್ಡೆ, ಜಿಲ್ಲಾ ಸಮಿತಿ ಸದಸ್ಯರಾಗಿ ಎ.ಡಿ. ನಾಗಪ್ಪ ಆಯ್ಕೆ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry