ಭಾನುವಾರ, ಜೂನ್ 13, 2021
21 °C

ನೊಂದವರ ಧ್ವನಿಯಾಗಿ ಸಂಘಟನೆ ಹೊರಹೊಮ್ಮಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ದೀನ ದಲಿತರ, ಶೋಷಣೆಗೊಳಗಾಗಿ ನೊಂದವರ ಧ್ವನಿಯಾಗಿ ದಲಿತ ಸಂಘಟನೆಗಳು ಹೊರಹೊಮ್ಮಬೇಕು ಎಂದು ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮಣ್ ಸಾಗರ್ ತಿಳಿಸಿದರು.ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ದಲಿತ ಸಂಘರ್ಷ ಸಮಿತಿ ಶಾಖಾ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.ಶರಾವತಿ ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿ ಹಲವು ದಶಮಾನಗಳಿಂದ ಶೋಷಣೆಗೆ ಒಳಗಾದ ದಲಿತರಿದ್ದು, ಈವರೆಗೂ ಅವರು ಸಂಘಟಿತರಾಗಿಲ್ಲ. ತಲೆಯ ಮೇಲೊಂದು ಸೂರಿಲ್ಲದೇ ಸುಮಾರು 40-50 ವರ್ಷಗಳಿಂದಲೂ ಬವಣೆಪಡುತ್ತಿದ್ದಾರೆ. ಕೆಲವರಿಗೆ ಪಡಿತರ ಚೀಟಿ ಇಲ್ಲ. ಇನ್ನು ಕೆಲವರಿಗೆ ಸರಕಾರಿ ಸವಲತ್ತುಗಳನ್ನು ಪಡೆಯಲು ಜಾತಿ ಪತ್ರಗಳಿಲ್ಲ, ಬದುಕಲು ಬೇಕಾದ ಮೂಲ ಸವಲತ್ತುಗಳೇ ಇಲ್ಲ. ಇಂಥ ಕುಟುಂಬಗಳ ಪರವಾಗಿ ಸಂಘಟನೆ ಮುಂದಿನ ದಿನಗಳಲ್ಲಿ ತೀವ್ರ ತೆರನಾದ ಹೋರಾಟವನ್ನು ನಡೆಸಲಿದೆ ಎಂದು ಹೇಳಿದರು.ತಾಲ್ಲೂಕು ಸಂಚಾಲಕ ಅರಮನೆಕೇರಿ ಸೋಮಶೇಖರ್ ಮಾತನಾಡಿ, ಹಲವು ದಶಮಾನಗಳಿಂದ ಮಲ ಗುಂಡಿತೊಳೆಯುವ ಸಫಾಯಿ ಕರ್ಮಾಚಾರಿಗಳು ಶರಾವತಿ ಯೋಜನಾ ಪ್ರದೇಶದಲ್ಲಿದ್ದರೂ, ಸರಕಾರದ ಸವಲತ್ತುಗಳು ಇವರಿಗೆ ದೊರಕದೇ ವಂಚನೆಗೊಳಗಾಗುತ್ತಿದ್ದು, ಅವರನ್ನು ಗುರುತಿಸಿ ಸಂಘಟನೆ ಮೂಲಕ ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಸಲಾಗುವುದು ಎಂದರು.ಮುಖಂಡರಾದ ಚಿಪ್ಪಳಿ ಮಂಜುನಾಥ್, ಚಂದ್ರಪ್ಪ, ಅಂಬಯ್ಯ, ರೋಶಯ್ಯ ನೇದರಪಲ್ಲಿ ಉಪಸ್ಥಿತರಿದ್ದರು.

ಚಿಪ್ಪಳಿ ಮಂಜುನಾಥ್ ಕ್ರಾಂತಿ ಗೀತೆ ಹಾಡಿದರು. ಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿ, ವೆಂಕಟೇಶ್ ಪುತ್ತ ಕಾರ್ಯಕ್ರಮ ನಿರೂಪಿಸಿದರು.ದಸಸಂ ನೂತನ ಪದಾಧಿಕಾರಿಗಳು: ಅಂಬಯ್ಯ ಜೋಗ್‌ಫಾಲ್ಸ್ ಸಂಚಾಲಕರು, ವೆಂಕಟೇಶ್‌ಪುತ್ತ ಖಜಾಂಚಿ, ಆರ‌್ಮಗಂವಟ್ಟಕ್ಕಿ, ವಿಜಯಕುಮಾರ್ ಜೋಗ್, ಮಹೇಶ್ ಕಾರ್ಗಲ್, ವೆಂಕಟೇಶ್, ರಾಜಪ್ಪ, ಶ್ರೀನಿವಾಸ, ನವೀನ್ ಸಂಘಟನಾ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.