ಶನಿವಾರ, ಫೆಬ್ರವರಿ 27, 2021
28 °C

ನೊಣಗಳ ಕಾಟ: ತಹಸೀಲ್ದಾರ್ ತಂಡದಿಂದ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೊಣಗಳ ಕಾಟ: ತಹಸೀಲ್ದಾರ್ ತಂಡದಿಂದ ಪರಿಶೀಲನೆ

ಹುಮನಾಬಾದ್: ನಗರದ ಹಣಕುಣಿ ರಸ್ತೆಗೆ ಹೊಂದಿಕೊಂಡಿರುವ ಶಿಕ್ಷಕರ ಬಡಾವಣೆ ಮೊದಲಾದ ಕಡೆಗಳಲ್ಲಿ ನೊಣಗಳ ಕಾಟದಿಂದ ರೋಗಭೀತಿ ಹೆಚ್ಚಿದ ಕುರಿತು ಸಾರ್ವಜನಿಕರ ದೂರು ಆಲಿಸಿ, ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿದ ಆದೇಶದ ಮೇರೆಗೆ  ತಹಸೀಲ್ದಾರ್ ನೇತೃತ್ವದ ತಂಡ ಬುಧವಾರ ಮಧ್ಯಾಹ್ನ ಪಟ್ಟಣದ ವಿವಿಧೆಡೆ ಭೇಟಿನೀಡಿ ಪರಿಶೀಲನೆ ನಡೆಸಿತು.ತಹಸೀಲ್ದಾರ ನೇತೃತ್ವದ ತಂಡ ಕೋಳಿಫಾರ್ಮ್ ಪರಿಶೀಲಿಸಿ ಹೊರ ಬಂದ ಬಳಿಕ ಶಿಕ್ಷಕರ ಬಡಾವಣೆ ಸುತ್ತಲಿನ ನೂರಾರು ಸಂಖ್ಯೆ ನಿವಾಸಿಗಳು ಸ್ಥಳಕ್ಕೆ ಬಂದು ರೋಗ ತಗುಲಿ ಪ್ರತಿನಿತ್ಯ ಇಲ್ಲಿ ಹತ್ತಾರು ಕೋಳಿಗಳು ಮೃತಪಡುತ್ತವೆ. ಅವುಗಳನ್ನು ನಿಯಮ ಅನುಸಾರ ದೂರ ಸಾಗಿಸಬೇಕು. ಆದರೇ ಫಾರ್ಮ್‌ನವರು ಅವುಗಳನ್ನು ಅಕ್ಕಪಕ್ಕದಲ್ಲೇ ಬೀಸಾಡುತ್ತಿರುವ ಕಾರಣ ನೊಣಗಳು ಸಂಖ್ಯೆ ಹೆಚ್ಚುತ್ತಿದೆ.ದುರ್ನಾತದಿಂದ ತಮಲ್ಲಿ ರೋಗಭೀತಿ ಹೆಚ್ಚಿದ್ದು ಕೋಳಿಫಾರ್ಮ್‌ಅನ್ನು ಮುಲಾಜಿಲ್ಲದೇ ಸ್ಥಳಾಂತರಿಸಬೇಕು ಎಂದು ತಹಸೀಲ್ದಾರ ಅವರ ಎದುರಿಗೆ ನೋವು ತೋಡಿಕೊಂಡರು.ಹಣಕುಣಿ ಮಾರ್ಗದಲ್ಲಿ ಇರುವ ಆರ್ಯವೈಶ್ಯ ಬಡಾವಣೆ, ವಾಂಜ್ರಿ, ರೇಷ್ಮೆ ಇಲಾಖೆ ಕಚೇರಿ, ಡಾಕ್ಟರ್ ಕಾಲೋನಿ ಅಲ್ಲದೇ ನಗರದ ಪದವಿಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ವಸತಿ      ನಿಲಯದಲ್ಲಿ ಎಲ್ಲವೂ ಸರಿ ಇಲ್ಲದಿರುವ ಕುರಿತು ತಹಸೀಲ್ದಾರ ಅವರ ಎದುರಿಗೆ ಅಳಲು ತೋಡಿಕೊಂಡರು.ವಸತಿ ನಿಲಯ ಅಡುಗೆ ಕೋಣೆಯಲ್ಲಿ ಸಾವಿರಾರು ನೊಣಗಳು ಇರುವುದು ಕಂಡು ತಹಸೀಲ್ದಾರ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಆ ಭಾಗದಲ್ಲಿನ ಭಗತ್‌ಸಿಂಗ್ ಮೊದಲಾದ ಶಾಲೆಗಳಿಗೆ ಭೇಟಿನೀಡಿ, ಪರಿಶೀಲಿಸಿದರು.ಜಿಲ್ಲಾಧಿಕಾರಿಗೆ ವರದಿ: ಪರಿಶೀಲನೆ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ತಹಸೀಲ್ದಾರ ಸಿ.ಲಕ್ಷ್ಮಣರಾವ ಪ್ರತಿಕ್ರಿಯೆ ನೀಡಿದ್ದು ಹೀ ಪತ್ರಿಕಾ ವರದಿ ಆಧರಿಸಿ, ಜಿಲ್ಲಾಧಿಕಾರಿ ಅವರು ನೀಡಿದ ಆದೇಶದ ಮೇರೆಗೆ ಸ್ಥಳ ಪರಿಶೀಲಿಲನೆ  ಕೈಗೊಂಡಿದ್ದು, ವಾಸ್ತವದ ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಗುವುದು. ಬಳಿಕ ಅವರಿಂದ ಬರುವ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಇಂಜಿನಿಯರ ಅಣ್ಯಪ್ಪ, ನೈರ್ಮಲ್ಯ ನಿರೀಕ್ಷಕ ಲೋಹಿತ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.