ನೋಕಿಯಾ `ಆಶಾ'ದಲ್ಲಿ ಫೇಸ್‌ಬುಕ್ ಸೌಲಭ್ಯ

7

ನೋಕಿಯಾ `ಆಶಾ'ದಲ್ಲಿ ಫೇಸ್‌ಬುಕ್ ಸೌಲಭ್ಯ

Published:
Updated:
ನೋಕಿಯಾ `ಆಶಾ'ದಲ್ಲಿ ಫೇಸ್‌ಬುಕ್ ಸೌಲಭ್ಯ

ಬೆಂಗಳೂರು: ಯುವಜನರನ್ನು ಮೆಚ್ಚಿಸುವ ಸಲುವಾಗಿ ನೋಕಿಯಾದ ಹೊಸ ಆಶಾ 205 ಮೊಬೈಲ್ ಹ್ಯಾಂಡ್‌ಸೆಟ್‌ನಲ್ಲಿ `ಫೇಸ್‌ಬುಕ್' ಸಂಪರ್ಕ ಸೌಲಭ್ಯಅಳವಡಿಸಲಾಗಿದೆ ಎಂದು `ನೋಕಿಯಾ ಇಂಡಿಯಾ' ಮಾರುಕಟ್ಟೆ ನಿರ್ದೇಶಕ ವಿರಲ್ ಓಝಾ ಇಲ್ಲಿ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೇಸ್‌ಬುಕ್ ಷಾರ್ಟ್‌ಕಟ್ ಕೀ ಹೊಂದಿರುವ ನೋಕಿಯಾದ ಮೊದಲ ಫೋನ್ ಇದಾಗಿದೆ. ಜನಪ್ರಿಯ ಸಾಮಾಜಿಕ ತಾಣದ ತ್ವರಿತ ಸಂಪರ್ಕಕ್ಕೆ ಇದು ಸಹಕಾರಿ. ಇದರಲ್ಲಿ 40 ಉಚಿತ ಗೇಮ್‌ಗಳೂ ಇವೆ. ಹ್ಯಾಂಡ್‌ಸೆಟ್ ಬೆಲೆ ರೂ. 3,499. ಡಿ. 24ರಿಂದ ಭಾರತದೆಲ್ಲೆಡೆ ಲಭ್ಯವಿರಲಿದೆ ಎಂದರು. ಫೇಸ್‌ಬುಕ್ ಇಂಡಿಯಾದ ಕೆವಿನ್ ಡಿಸೋಜ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry