ನೋಕಿಯಾ: ವಿಂಡೋಸ್ ಸ್ಮಾರ್ಟ್‌ಫೋನ್

7

ನೋಕಿಯಾ: ವಿಂಡೋಸ್ ಸ್ಮಾರ್ಟ್‌ಫೋನ್

Published:
Updated:

ಲಂಡನ್ (ಪಿಟಿಐ): ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ಕಂಪೆನಿ ನೋಕಿಯಾ, ವಿಂಡೋಸ್ ಕಾರ್ಯನಿರ್ವಹಣಾ ತಂತ್ರಾಂಶ (ಒಎಸ್) ಹೊಂದಿರುವ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.`ಲುಮಿಯಾ 800~ ಮತ್ತು `ಲುಮಿಯಾ 710~ ಹೆಸರಿನ ಈ ಸ್ಮಾ ರ್ಟ್ ಫೋನ್‌ಗಳ ಬೆಲೆ ಕ್ರಮವಾಗಿ ್ಙ29,000 ಮತ್ತು ್ಙ19,000.ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ನೋಕಿಯಾ ಮೊದಲ ಸ್ಥಾನದಲ್ಲಿದ್ದರೂ, ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಆ್ಯಪಲ್ ಮತ್ತು ಸ್ಯಾಮ್ಸಂಗ್‌ನ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಗೂಗಲ್ ಆಂಡ್ರಾಯ್ಡ ಸ್ಮಾಟರ್ಡ್‌ಫೋನ್‌ಗಳು ನೋಕಿಯಾಗೆ ತೀವ್ರ ಸ್ಪರ್ಧೆ ಒಡ್ಡುತ್ತಿವೆ.ಸ್ಮಾರ್ಟ್‌ಫೋನ್‌ಗಳ ಜತೆಗೆ `ಆಶಾ~ ಹೆಸರಿನ 4 ಹೊಸ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನೂ ಕಂಪೆನಿ ಬಿಡುಗಡೆ ಮಾಡಿದೆ. ಆಶಾ ಮಾದರಿಯ  ಮೊಬೈಲ್‌ಗಳ ಬೆಲೆ  ್ಙ4,100ರಿಂದ ್ಙ8,000ರವರೆಗೆ ಇದೆ.`ಮೊಬೈಲ್ ಇಂಟರ್‌ನೆಟ್ ಮಾರುಕಟ್ಟೆಯತ್ತ ಕಂಪೆನಿ ಹೆಚ್ಚಿನ ಗಮನ ಹರಿಸುತ್ತಿದ್ದು, ಪ್ರವರ್ಥಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ `ವಿಂಡೋಸ್ ಸ್ಮಾರ್ಟ್‌ಫೋನ್~ ಬಿಡುಗಡೆ ಮಾಡುತ್ತಿದ್ದೇವೆ ಎಂದು ನೊಕಿಯಾದ ಅಧ್ಯಕ್ಷ  ಸ್ಟೀಪನ್ ಇಲಪ್  ಹೇಳಿದ್ದಾರೆ.`ಆಶಾ~ ಎಂದರೆ ಹಿಂದಿಯಲ್ಲಿ ಭರವಸೆ ಎಂದರ್ಥ. ವಿಶೇಷವಾಗಿ ಆಶಾ ಸರಣಿಯ ಮೊಬೈಲ್‌ಗಳನ್ನು ಸ್ಥಳೀಯವಾಗಿ, ಭಾರತೀಯ ಗ್ರಾಹಕರಿಗೆಂದೇ ವಿನ್ಯಾಸಗೊಳಿಸಲಾಗಿದೆ. ಅಗ್ಗದ ದರ ಈ ಮೊಬೈಲ್‌ಗಳು ಈ ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬರಲಿವೆ ಎಂದು ನೋಕಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮೇರಿ ಮ್ಯಾಕ್‌ಡೊವೆಲ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry