ನೋಕಿಯಾ: 11 ಹೊಸ ಅಪ್ಲಿಕೇಷನ್ಸ್ ಅಭಿವೃದ್ಧಿ

7

ನೋಕಿಯಾ: 11 ಹೊಸ ಅಪ್ಲಿಕೇಷನ್ಸ್ ಅಭಿವೃದ್ಧಿ

Published:
Updated:

ಬೆಂಗಳೂರು: ಮೊಬೈಲ್ ತಯಾರಿಕಾ ಸಂಸ್ಥೆ ನೋಕಿಯಾ, 11 ಹೊಸ ಬಗೆಯ ಬಹೂಪಯೋಗಿ ಅಪ್ಲಿಕೇಷನ್ಸ್‌ಗಳನ್ನು ಪರಿಚಯಿಸಿದ್ದು, ಈ ತಿಂಗಳಾಂತ್ಯಕ್ಕೆ ಈ ಹೊಸ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಾಗಲಿವೆ.

11 ಮಂದಿ ತಂತ್ರಜ್ಞರು ಅಭಿವೃದ್ಧಿಪಡಿಸಿದ ವೈವಿಧ್ಯಮಯ ಅಪ್ಲಿಕೇಷನ್ಸ್‌ಗಳನ್ನು ಗ್ರಾಹಕರು ತಮ್ಮ ಮೊಬೈಲ್‌ಗಳಲ್ಲಿ ಅಳವಡಿಸಿಕೊಂಡಿರುವುದು (ಡೌನ್‌ಲೋಡ್) ಈಗ 10 ಲಕ್ಷಕ್ಕೆ ತಲುಪಿದೆ. 

ಮೊಬೈಲ್ ಬಳಕೆದಾರರು ದಾಖಲೆ ಸಂಖ್ಯೆಯಲ್ಲಿ ಅಪ್ಲಿಕೇಷನ್ಸ್‌ಗಳನ್ನು ಅಳವಡಿಸಿಕೊಂಡಿರುವುದಕ್ಕೆ ಕಾರಣರಾಗಿರುವ ತಂತ್ರಜ್ಞರನ್ನು ಸಂಸ್ಥೆಯು `ನೋಕಿಯಾ ದಶಲಕ್ಷದ ಗುಂಪು~ ಎಂದು ಬಣ್ಣಿಸಿದೆ. ಹೊಸ ಅಪ್ಲಿಕೇಷನ್ಸ್‌ಗಳನ್ನು ಶೀಘ್ರದಲ್ಲೇ ಗ್ರಾಹಕರ ಬಳಕೆಗೆ ಬಿಡುಗಡೆ ಮಾಡಲಿದ್ದೇವೆ ಎಂದು ಎಂದು ಫೋರಂ ನೋಕಿಯಾ ಇಂಡಿಯಾದ ಮುಖ್ಯಸ್ಥ ಸುನಿಲ್ ರಾವ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry