ಶನಿವಾರ, ಮೇ 8, 2021
26 °C

ನೋಡುಗರ ಕಣ್ಣಲ್ಲಿ ಸೌಂದರ್ಯ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಕಲಾಕೃತಿಗಳಿಗೆ ಮನಸ್ಸು ಪ್ರತಿಕ್ರಿಯಿಸುವ ರೀತಿ ತುಂಬಾ ವ್ಯಕ್ತಿಗತವಾದ ಕ್ರಿಯೆ ಎಂಬುದನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆಹಚ್ಚಿದ್ದಾರೆ.ಇದರೊಂದಿಗೆ `ಸೌಂದರ್ಯ ನೋಡುಗರ ಕಣ್ಣುಗಳಲ್ಲಿದೆ~ ಎಂಬ ಅನುಭವದ ಉಕ್ತಿಯು ವೈಜ್ಞಾನಿಕವಾಗಿಯೂ ಸಾಬೀತಾದಂತೆ ಆಗಿದೆ.ಕಲಾಕೃತಿಯೊಂದನ್ನು ವೀಕ್ಷಿಸಿದಾಗ ಪ್ರತಿಯೊಬ್ಬರ ಮಿದುಳಿನಲ್ಲಿಯೂ ನಿರ್ದಿಷ್ಟ ಭಾಗದ ಕೋಶಗಳು ಚಲನಶೀಲವಾಗುತ್ತವೆ. ಆದರೆ, ಆ ನಿರ್ದಿಷ್ಟ ಭಾಗಗಳು ವ್ಯಕ್ತಿಯ ವ್ಯಕ್ತಿಗತ ಪ್ರತಿಕ್ರಿಯೆಯೊಂದಿಗೆ ತಳುಕು ಹಾಕಿಕೊಂಡಿರುತ್ತವೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.ಈ ಪರೀಕ್ಷೆಗಾಗಿ ಆಯ್ದುಕೊಂಡಿದ್ದವರಿಗೆ ಹಲವು ಸಂಸ್ಕೃತಿ, ಚರಿತ್ರೆಯ ವಿವಿಧ ಅವಧಿಗೆ ಸೇರಿದ ಭಿನ್ನ ಶೈಲಿಯ 109 ಕಲಾಕೃತಿಗಳನ್ನು ತೋರಿಸಲಾಯಿತು. ಅವರು ಅದನ್ನು ನೋಡುವ ಅವಧಿಯಲ್ಲಿ `ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್~ (ಎಫ್‌ಎಂಆರ್‌ಐ) ತಂತ್ರಜ್ಞಾನ ಬಳಸಿ ಮಿದುಳಿನಲ್ಲಿನ ರಕ್ತದ ಹರಿವಿನ ಪ್ರಮಾಣದ ಮೇಲೆ ನಿಗಾ ಇಡಲಾಯಿತು.ನಂತರ ಆ ವ್ಯಕ್ತಿಗಳಿಗೆ ನಿರ್ದಿಷ್ಟ ಕಲಾಕೃತಿಯನ್ನು ನೋಡಿದಾಗ ತಮಗುಂಟಾದ ಭಾವನೆ ಏನೆಂಬುದನ್ನು ತಿಳಿಸಲು ಕೋರಲಾಯಿತು. ಅಂತಿಮವಾಗಿ ಇವನ್ನು ವಿಶ್ಲೇಷಿಸಿದಾಗ ಒಂದೊಂದು ಕಲಾಕೃತಿಯೂ ಪ್ರತಿಯೊಬ್ಬರ ಮೇಲೂ ಭಿನ್ನವಾದ ವ್ಯಕ್ತಿಗತ ಪರಿಣಾಮ ಬೀರಿದ್ದು ಸ್ಪಷ್ಟಗೊಂಡಿತು ಎಂಬುದು ಸಂಶೋಧಕರ ವಿವರಣೆ.ಕಲಾಕೃತಿಯೊಂದು ಏಕಕಾಲಕ್ಕೆ ಹೇಗೆ  ವ್ಯಕ್ತಿಗತವಾಗಿರುತ್ತದೆ ಎಂಬ ಕಾಡುವ ಪ್ರಶ್ನೆಗೂ ಇದರಿಂದ ವಿವರಣೆ ನೀಡಲು ಸಾಧ್ಯವಾಗಲಿದೆ ಎಂಬುದು ತಜ್ಞರ ಆಶಾವಾದ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.