ಮಂಗಳವಾರ, ಮೇ 18, 2021
30 °C

ನೋವಿಗೆ ಗುಳಿಗೆ ಇಲ್ಲದ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆನಡಾದಿಂದ ಬಂದಿರುವ ಜಮಿಲಾ ಮಾ ದೇವ್‌ಜಿ ಹಾಗೂ ಗುಲ್ಶನ್ ಎಂ. ಜಾಫರ್ ಮೊಗದಲ್ಲಿ ಸಂತಸ. ಮಂಡಿನೋವಿನಿಂದ ಬಳಲುತ್ತಿದ್ದ ಜಮಿಲಾ ಈಗ ನಡೆದಾಡುತ್ತಿದ್ದರು. ಅಷ್ಟು ದೂರದಿಂದ ನಗರಕ್ಕೆ ಬಂದಿದ್ದ 71ರ ವಯೋಮಾನದ ಅವರಿಗೆ ಆರು ವರ್ಷದಿಂದ ಸಂಧಿವಾತದ ಸಮಸ್ಯೆಯಿತ್ತು. ತಮ್ಮೂರಿನ ವೈದ್ಯರ ಸಲಹೆ ಮೇರೆಗೆ ಶಸ್ತ್ರರಹಿತ ಚಿಕಿತ್ಸೆಗೆಂದು ಇಲ್ಲಿಗೆ ಬಂದು ಗುಣಮುಖರಾದರು.ಪಾಕಿಸ್ತಾನದ ಇಸ್ಲಾಮಾಬಾದ್‌ನ ಅಬಿದಾ ಪರ್ವೀನ್‌ಗೆ ಸುಮಾರು 55 ವರ್ಷ ವಯಸ್ಸು.10 ವರ್ಷಗಳಿಂದ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆಂದು ಜರ್ಮನಿಯ ಹೈಸ್ಪೆಷಾಲಿಟಿ ಆಸ್ಪತ್ರೆಗೆ ಹೋದರು. ಆದರೂ ಕಾಲುನೋವು ನಿವಾರಣೆಯಾಗಲಿಲ್ಲ. ಇದನ್ನು ಗಮನಿಸಿದ ಅಬಿದಾ ಪತಿಯೊಂದಿಗೆ ಬೆಂಗಳೂರಿಗೆ ಬಂದು, ಇದೇ ಜಾಗದಲ್ಲಿ ಚಿಕಿತ್ಸೆ ಪಡೆದರು.ಹೀಗೆ ಒಬ್ಬೊಬ್ಬರು ಒಂದೊಂದು ನೋವಿನ ಕಥೆಯನ್ನು ಬಿಚ್ಚಿಟ್ಟಿದ್ದು ನಗರದ ಮಾರತ್‌ಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿರುವ `ಎಸ್‌ಬಿಎಫ್ ಹೆಲ್ತ್‌ಕೇರ್~ ಆಸ್ಪತ್ರೆಯಲ್ಲಿ. ಪಾಕಿಸ್ತಾನ, ಕೆನಡಾ, ಮಲೇಷ್ಯಾ... ಸೇರಿದಂತೆ ಅನೇಕ ದೇಶಗಳಿಂದ ಬಂದಿರುವ ರೋಗಿಗಳು ಶಸ್ತ್ರಚಿಕಿತ್ಸೆ ಇಲ್ಲದೇ `ಆಕ್ಟಿಸ್~ ಯಂತ್ರದಿಂದ ಕ್ಯೂಎಂಆರ್ ಚಿಕಿತ್ಸೆ ಮಾಡಿಸಿಕೊಳ್ಳಲು ಬಂದವರು.ಎಸ್‌ಬಿಎಫ್ ಹೆಲ್ತ್‌ಕೇರ್‌ನ ಸಿಇಒ ವಿಂಗ್ ಕಮಾಂಡರ್ ಡಾ.ವಿ.ಜಿ. ವಸಿಷ್ಠ ಹೇಳುವಂತೆ ಪ್ರಪಂಚದ ಜನಸಂಖ್ಯೆಯ ಶೇ.20ರಷ್ಟು ಮಂದಿ ಸಂಧಿವಾತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಯಸ್ಸಾದಂತೆ ಮೂಳೆ ಸವೆದು ಹೋಗುವುದು, ಅತಿಯಾದ ತೂಕ ಸೇರಿದಂತೆ ಇನ್ನಿತರೆ ಕಾರಣಗಳಿಂದಲೂ ಈ ಸಮಸ್ಯೆ ಉಂಟಾಗುತ್ತದೆ.

 

ಹೀಗಾದಾಗ ನೋವು ನಿವಾರಕ ಮಾತ್ರೆಗಳನ್ನು ನುಂಗುವ ಅಥವಾ ಇಂಜೆಕ್ಷನ್ ಕೊಡಿಸಿಕೊಳ್ಳುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಾರೆ. ಇದರಿಂದ ಅಡ್ಡ ಪರಿಣಾಮವಾಗುವ ಸಂಭವವಿರುತ್ತದೆ ಎನ್ನುತ್ತಾರೆ ವಸಿಷ್ಠ.ಕ್ಯೂಎಂಆರ್ (ಕ್ವಾಂಟಮ್ ಮ್ಯಾಗ್ನೆಟಿಕ್ ರೆಸೊನೆನ್ಸ್) ಚಿಕಿತ್ಸೆಯಲ್ಲಿ ವಿದ್ಯುತ್ ಆಯಸ್ಕಾಂತೀಯ ಕಿರಣಗಳನ್ನು ಬಳಸಲಾಗುತ್ತದೆ. ಆಸ್ಟಿಯೋ ಆರ್ಥ್ರೈಟಿಸ್ ಪ್ರಕರಣಗಳಲ್ಲಿ ವಯೋಮಾನದ ಏರಿಕೆಯಿಂದಾಗಿ ಸವೆದುಹೋಗುವ ಅಂಗಾಂಶಗಳನ್ನು ಪುನರುಜ್ಜೀವನಗೊಳಿಸಲು ವಿದ್ಯುದಯಸ್ಕಾಂತೀಯ ಕಿರಣಗಳನ್ನು ಹಾಯಿಸಲಾಗುತ್ತದೆ.ಅಧಿಕ ತೀವ್ರತೆಯ ಕಿರಣಗಳನ್ನು ಮೊಣಕಾಲಿನ ಕೀಲುಗಳತ್ತ ಹಾಯಿಸಿದಾಗ ಅವು ನಿರ್ದಿಷ್ಟ ಕೋಶಗಳನ್ನು ಉದ್ದೀಪಿಸಿ ಮೃದ್ವಸ್ತಿಗಳ ಪುನರ್ ಉತ್ಪಾದನೆಯಲ್ಲಿ ತೊಡಗುವಂತೆ ಮಾಡುತ್ತವೆ.

 

ಇದು ಛೇದ ರಹಿತವೂ, ನೋವಿಲ್ಲದ್ದೂ ಹಾಗೂ ಸುರಕ್ಷಿತವೂ ಆಗಿದೆ ಎಂದು ಮಾಹಿತಿ ನೀಡುತ್ತಾರೆ ವಸಿಷ್ಠ. ಅವರು ಭಾರತೀಯ ವಾಯುಪಡೆಯ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ನ ರೆಡಿಯೋ ಡಯಾಗ್ನಾಸಿಸ್‌ನ ಮಾಜಿ ಪ್ರಾಧ್ಯಾಪಕರಾಗಿದ್ದರು.ಆಸ್ಟಿಯೋ ಆರ್ಥ್ರೈಟಿಸ್ 21 ದಿನಗಳ ಒಂದು ಚಿಕಿತ್ಸಾ ಪ್ರಕ್ರಿಯೆಯಾಗಿದ್ದು, ಇದಕ್ಕಾಗಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಪ್ರತಿದಿನ ಚಿಕಿತ್ಸೆಗೆ 90 ನಿಮಿಷ ಸಮಯ ಬೇಕಾಗುತ್ತದೆ. ಭಾರತದಲ್ಲಿ ಮೊದಲ ಕ್ಯೂಎಂಆರ್ ಚಿಕಿತ್ಸೆ ಕೇಂದ್ರ ಇದಾಗಿದ್ದು, ಮುಂಬೈ ಎಸ್‌ಬಿಎಫ್ ಹೆಲ್ತ್‌ಕೇರ್‌ನಲ್ಲೂ ಈ ಚಿಕಿತ್ಸೆ ಪಡೆಯಬಹುದು. ಅಂದಹಾಗೆ, ಇಂದು (ಏ.7) ವಿಶ್ವ ಆರೋಗ್ಯ ದಿನ.  ಮಾಹಿತಿಗೆ: 99002 18854, 4211 6555. www.sbfhealth care.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.