ನೋವಿನಲ್ಲೂ ಸಂಭ್ರಮ

7

ನೋವಿನಲ್ಲೂ ಸಂಭ್ರಮ

Published:
Updated:

ನವದೆಹಲಿ:  ಸಾವಿನ ರುದ್ರ ನರ್ತನದ ನಡುವೆಯೂ ಗಲಭೆ ಪೀಡಿತ ಮುಜಫ್ಫರ್‌ ನಗರ ಜಿಲ್ಲೆಯ ಗ್ರಾಮಗಳ ಪರಿ ಹಾರ ಶಿಬಿರಗಳಲ್ಲಿ ಹೊಸ ಬದುಕಿನ ಆಶಾ ಕಿರಣ ಮೂಡಿದೆ.ಶಹಪುರ ಶಿಬಿರದಲ್ಲಿ ಬುಧವಾರ 27 ಯುವತಿಯರು ದಾಂಪತ್ಯ ಬದುಕಿಗೆ ಕಾಲಿಟ್ಟರು.ತಿಂಗಳ ಹಿಂದೆಯೇ ಇವರೆಲ್ಲ ಮದುವೆ ನಿಶ್ಚಯವಾಗಿತ್ತು. ಆದರೆ ಗಲಭೆಯ ಕಾರಣ ಕುಟುಂಬದವರಲ್ಲಿ ಆತಂಕ ಮೂಡಿತ್ತು. ಕೆಲವರಂತೂ ಮದುವೆಗಾಗಿ ಜೋಡಿಸಿಕೊಂಡಿದ್ದ ಒಡವೆ ವಸ್ತ್ರಗಳನ್ನೂ ಕಳೆದುಕೊಂಡಿದ್ದರು.ಆದರೆ ಪಟ್ಟಣ ಪಂಚಾಯ್ತಿ ನೆರವಿನೊಂದಿಗೆ ಕೊನೆಗೂ ಮದುವೆ ನೆರವೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry