ನೌಕರರಿಂದ ಅಂಚೆಕಾರ್ಡ್ ಚಳವಳಿ

7

ನೌಕರರಿಂದ ಅಂಚೆಕಾರ್ಡ್ ಚಳವಳಿ

Published:
Updated:

ಬೆಳಗಾವಿ: ರಾಜ್ಯದಲ್ಲಿ 6ನೇ ವೇತನ ಆಯೋಗ ರಚಿಸಬೇಕು ಹಾಗೂ ಮಧ್ಯಂತರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ವತಿಯಿಂದ ಗುರುವಾರ ನಗರದಲ್ಲಿ ಅಂಚೆ ಕಾರ್ಡ್ ಚಳವಳಿಗೆ ಚಾಲನೆ ನೀಡಲಾಯಿತು.ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ನಡುವೆ ಸಾಕಷ್ಟು ವೇತನ ತಾರತಮ್ಯತೆ ಇದ್ದು, ಅದನ್ನು ಸರಿಪಡಿಸುವ ಉದ್ದೇಶದಿಂದ 6ನೇ ವೇತನ ಆಯೋಗ ರಚಿಸಬೇಕು; ಅದರ ಶಿಫಾರಸುಗಳು ಜಾರಿಗೆ ತರುವ ಮುನ್ನ ಮಧ್ಯಂತರ ಪರಿಹಾರ ನೀಡಬೇಕು; ವಂತಿಕೆ ಆಧಾರಿತ ನಿವೃತ್ತಿ ವೇತನ ಯೋಜನೆಯನ್ನು ಕೈ ಬಿಟ್ಟು ಎಲ್ಲ ನೌಕರರಿಗೆ ಹಳೆಯ ನಿವೃತ್ತಿ ವೇತನ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಮನವಿ ಮಾಡಲಾಗಿದೆ.ಒಕ್ಕೂಟದ ಮಾಜಿ ಅಧ್ಯಕ್ಷ ಸುನೀಲ್ ವಿಶ್ವನಾಥ, ಕಾರ್ಯದರ್ಶಿ ರಾಹುಲ್ ಮೇತ್ರಿ, ಉಪಾಧ್ಯಕ್ಷ ಯಲ್ಲಪ್ಪ ಬಾಳಿಗಡ್ಡಿ, ಬಸವರಾಜ ಚನ್ನನವರ, ಎಲ್.ಕೆ. ಧಾರವಾಡ, ನದಾಫ್, ಡಿ.ಎಂ. ಬಿಡಿಕರ, ಎ.ಎನ್. ಅಷ್ಟಗಿಮಠ, ಮಂಜಪ್ಪ, ಬಿ.ಕೆ. ಪಾಟೀಲ, ಆದರ್ಶ ಕಿತ್ತೂರು, ಸತೀಶ ದೊಡ್ಡಮನಿ, ಸುರೇಶ ಕುರಡೆ ಮತ್ತಿತರರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ಈ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry