ಭಾನುವಾರ, ಜನವರಿ 19, 2020
20 °C

ನೌಕರಿಗೆ ಸೇತುವೆ ಪ್ರವಾಸೋದ್ಯಮ ಕೋರ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿಶ್ವದಾದ್ಯಂತ ಪ್ರವಾಸೋದ್ಯಮ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಈ ಕ್ಷೇತ್ರದ ಪರಿಣಿತರಿಗೆ ಉದ್ಯೋಗ ಅವಕಾಶಗಳು ವಿಫುಲವಾಗಿವೆ. ಇಂಥ ಅವಕಾಶ ಗಿಟ್ಟಿಸಿಕೊಳ್ಳಲು ರಾಜ್ಯದ ಐದು ಕಾಲೇಜುಗಳು ಪ್ರವಾಸೋದ್ಯಮ ಪದವಿ ಕೋರ್ಸ್‌ ಅಳವಡಿಸಿಕೊಂಡಿವೆ. ಅವುಗಳಲ್ಲಿ ಗುಲ್ಬರ್ಗದ ಶರಣಬಸವೇಶ್ವರ ಪದವಿ ಕಾಲೇಜು ಸಹ ಮುಂಚೂಣಿಯಲ್ಲಿದೆ.ಆದಾಯ ಗಳಿಕೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ‘ಟೂರಿಸಂ’ ಮಹತ್ವದ ಸ್ಥಾನ ಪಡೆದಿದೆ. ವಿಶ್ವ ಪ್ರವಾಸೋ ದ್ಯಮದ ವಾರ್ಷಿಕ ವಹಿವಾಟು ವಾರ್ಷಿಕ 1,877 ಬಿಲಿಯನ್‌ ಡಾಲರ್‌ ದಾಟಿದೆ ಎಂಬುದು ಪ್ರಪಂಚ ಪರ್ಯಟನೆ ಹಾಗೂ ಪ್ರವಾಸೋದ್ಯಮ ಪರಿಷತ್‌ ನೀಡುವ ಮಾಹಿತಿ. ಈ ಅಂಕಿ–ಅಂಶ ಪ್ರವಾಸೋದ್ಯಮ ಕ್ಷೇತ್ರದ ಅಭ್ಯುದಯಕ್ಕೆ ಕನ್ನಡಿ. ಹೀಗಾಗಿ ಈ ಕ್ಷೇತ್ರದತ್ತ ವಿದ್ಯಾರ್ಥಿಗಳು ಆಕರ್ಷಿತ ರಾಗುತ್ತಿದ್ದಾರೆ.ಪಿಯುಸಿ ನಂತರ ಮುಂದೇನು? ಎನ್ನುವ ವಿದ್ಯಾರ್ಥಿಗಳಿಗೆ ಸುಲಭವಾಗಿ ನೀಡಬಹುದಾದ ಸಲಹೆ  ‘ಪ್ರವಾಸೋದ್ಯಮ ಆಡಳಿತ ಸ್ನಾತಕೋತ್ತರ ಪದವಿ (ಎಂಟಿಎ). ಐದು ವರ್ಷ ಅವಧಿಯ (ಕೆಲವೆಡೆ 3ವರ್ಷ) ಈ ಪದವಿ ಕೋರ್ಸ್ ಕಲಿತವರಿಗೆ ಪ್ರವಾಸೋದ್ಯಮದಲ್ಲಿ ಉದ್ಯೋಗ ಗ್ಯಾರಂಟಿ.ಎಂಟಿಎ ಕೋರ್ಸ್ ಗುಲ್ಬರ್ಗ, ಮೈಸೂರು, ಶಿವಮೊಗ್ಗ ಧಾರವಾಡ ಹಾಗೂ ಬೆಂಗಳೂರಿನ ಕಾಲೇಜುಗಳಲ್ಲಿದೆ. ನಗರದ ಶರಣಬಸವೇಶ್ವರ ಪದವಿ ಪ್ರವಾಸೋದ್ಯಮ ಕಾಲೇಜು ಗುಲ್ಬರ್ಗ ವಿಶ್ವವಿದ್ಯಾಲಯ ಸಂಯೋಜನೆ ಒಳಗೊಂಡಿದೆ. ಪಿಯುಸಿ ಉತ್ತೀರ್ಣರಾದವರು ಈ ಕೋರ್ಸ್‌ಗೆ ಸೇರಲು ಅರ್ಹರು. ಪ್ರತಿವರ್ಷ 80 ವಿದ್ಯಾರ್ಥಿ ಗಳಿಗೆ ಪ್ರವೇಶಾತಿ ನೀಡಲು ವಿ.ವಿ ಸಮ್ಮತಿಸಿದೆ. ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡಲಾ ಗುತ್ತದೆ.ಪ್ರವಾಸೋದ್ಯಮದ ಶಿಸ್ತುಬದ್ಧ  ಹಾಗೂ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗಿದೆ.ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ನೇಮಕಾತಿಯಲ್ಲಿ ಆದ್ಯತೆ ನೀಡುತ್ತಿದೆ. ಐಟಿಡಿಸಿ, ಪ್ರಾಚ್ಯವಸ್ತು ಇಲಾಖೆ, ಜಂಗಲ್ ರೆಸಾರ್ಟ್, ಪ್ರತಿಷ್ಠಿತ ಹೋಟೆಲ್‌ಗಳು, ಪ್ರವಾಸಿತಾಣ ಅಭಿವೃದ್ಧಿ ಸಂಸ್ಥೆ, ವಿಮಾನ ಯಾನ... ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗವಕಾಶಗಳಿವೆ. ಸಂಬಳ ರೂ 12ರಿಂದ ರೂ 1 ಲಕ್ಷ ವರೆಗೆ ಪಡೆಯ ಬಹುದು. ಐತಿಹಾಸಿಕ ಸ್ಥಳಗಳಿಗೆ ಬರುವ ಪ್ರವಾಸಿ ಗರಿಗೆ ಮಾರ್ಗದರ್ಶನ (ಗೈಡ್) ನೀಡುವುದು ಕೋರ್ಸಿನ ಪ್ರತಿಷ್ಠೆ. ಇತ್ತೀಚೆಗೆ ಪ್ರವಾಸೋದ್ಯಮ ಹಲವು ಆಯಾಮ ಪಡೆದಿದ್ದು, ವಿದ್ಯಾರ್ಥಿಗಳಿಗೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ.ಗುಲ್ಬರ್ಗದ ಎಂಟಿಎ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ಕಲಿತವರು ದೇಶದ ವಿವಿಧೆಡೆ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ತಾಜ್, ಕೇಸರಿ ಸೇರಿದಂತೆ ಪ್ರತಿಷ್ಠಿತ ಹೋಟೆಲ್‌, ಟೂರ್ ಟ್ರಾವೆಲ್ ಏಜೆನ್ಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಸಕ್ರಿಯವಾಗಿದ್ದು, ಹೊಸಬರಿಗೆ ನೌಕರಿ ಕೊಡಿಸುವಲ್ಲಿ ಸೇತುವೆಯಾಗಿದೆ. ಸೊಲ್ಲಾಪುರ, ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಸಹ ಇಲ್ಲಿ ಪ್ರವೇಶ ಪಡೆಯುತ್ತಿದ್ದಾರೆ.

ಕೋರ್ಸ್‌ನ ಹೆಚ್ಚಿನ ಮಾಹಿತಿಗೆ 08472-– 250955 ಸಂಪರ್ಕಿಸಬಹುದು.ಹೈ.ಕದಲ್ಲಿ ಅರಿವು ಕಡಿಮೆ

ಪ್ರತಿವರ್ಷ 80 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಗುಲ್ಬರ್ಗ ವಿ.ವಿ ಅನುಮತಿ ನೀಡಿದೆ. ಆದರೆ, ಶೇ 50ರಷ್ಟು ಸೀಟುಗಳು ಖಾಲಿ ಉಳಿಯುತ್ತಿವೆ. ವಿದ್ಯಾರ್ಥಿಗಳಿಗೆ ಈ ಕೋರ್ಸ್‌ನ ಮಾಹಿತಿ ಇಲ್ಲ. ಉದ್ಯೋಗ ಗ್ಯಾರಂಟಿ ಇದ್ದರೂ ಸ್ಥಳೀಯರೇ ಪ್ರವೇಶ ಪಡೆಯುತ್ತಿಲ್ಲ.

ವಾಣಿಶ್ರೀ, ವಿಭಾಗದ ಮುಖ್ಯಸ್ಥೆ‘ಸಾಂಸ್ಕೃತಿಕ ವಿನಿಮಯ ಸಾಧ್ಯ’

ಪ್ರವಾಸೋದ್ಯಮ ಕೋರ್ಸ್‌ ಮುಗಿಸಿದರೆ ದೇಶದ ವಿವಿಧೆಡೆ ಕೆಲಸ ಮಾಡಲು ಅವಕಾಶವಿದೆ. ದೇಶದ ಪ್ರತಿಷ್ಠಿತ ತಾಣಗಳ ಮಾಹಿತಿ ನೀಡುವ ಕೆಲಸವೇ ಹೆಮ್ಮೆ ಎನಿಸುತ್ತಿದೆ. ಸಾಂಸ್ಕೃತಿಕ ವಿನಿಮಯಕ್ಕೆ ಇದಕ್ಕಿಂತ ಸೂಕ್ತವಾದ ಕೋರ್ಸ್ ಬೇರೊಂದಿಲ್ಲ.

ದಿಶಾ ಶಾನಭಾಗ್, ವಿದ್ಯಾರ್ಥಿನಿ‘ಕಾಲೇಜುಗಳ ಸಂಖ್ಯೆ ಹೆಚ್ಚಲಿ’

ಪ್ರವಾಸೋದ್ಯಮ ಕೋರ್ಸ್‌ ಹಿಂದುಳಿದ ಪ್ರದೇಶ ಹೈದರಾಬಾದ್ ಕರ್ನಾಟಕದ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಹೆಚ್ಚಿನ ಕಾಲೇಜುಗಳಲ್ಲಿ ಕೋರ್ಸ್‌ ಪರಿಚಯಿಸಿದರೆ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಸುರೇಖಾ ನಾಯಕೊಡ, ವಿದ್ಯಾರ್ಥಿನಿಸಾಹಸ ಪ್ರವೃತ್ತಿ ಬೆಳೆಸುತ್ತದೆ’

ಸಾಹಸ ಪ್ರವೃತ್ತಿಗೆ ಇಲ್ಲಿ ಅವಕಾಶವಿದೆ. ಸಾಹಸಕ್ರೀಡೆ, ರಮಣೀಯ ತಾಣಗಳಿಗೆ ಚಾರಣ ಕೈಗೊಳ್ಳುವುದು ರೋಚಕತೆ ಬೆಳೆಸುತ್ತದೆ. ವಿದೇಶಿಗರಿಗೆ ನಮ್ಮ ಸಂಸ್ಕೃತಿ, ಪರಂಪರೆ ಪರಿಚಯ ಮಾಡಿಸುವುದು ಆತ್ಮವಿಶ್ವಾಸ ವೃದ್ಧಿಸುತ್ತದೆ.

ದಿಲೀಪ್‌ಕುಮಾರ್, ವಿದ್ಯಾರ್ಥಿ

ಪ್ರತಿಕ್ರಿಯಿಸಿ (+)