ಮಂಗಳವಾರ, ಜನವರಿ 28, 2020
21 °C

ನೌಕಾಪಡೆ: ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವರ್ಗೀಕೃತ ಮಾಹಿತಿಗಳನ್ನು ಪಡೆದುಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನೌಕಾ ದಳದ ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಪಡೆಯ ತನಿಖಾ ಮಂಡಳಿ ಶಿಫಾರಸು ಮಾಡಿದೆ.ನೌಕಾ ದಳದ ತಾಂತ್ರಿಕ ವಿಭಾಗದ ಈ ನಾಲ್ವರು ಅಧಿಕಾರಿಗಳು ತಮ್ಮ ಖಾಸಗಿ ಕಂಪ್ಯೂಟರ್ ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ವರ್ಗೀಕೃತ ಮಾಹಿತಿ ವಿನಿಮಯ ಮಾಡಿಕೊಂಡಿದ್ದು ಪತ್ತೆಯಾಗಿದೆ ಎಂದು ನೌಕಾ ದಳದ ಮೂಲಗಳು ಹೇಳಿವೆ.

 

ಪ್ರತಿಕ್ರಿಯಿಸಿ (+)