ನೌಕಾ ಅಧಿಕಾರಿ ಆತ್ಮಹತ್ಯೆ

7

ನೌಕಾ ಅಧಿಕಾರಿ ಆತ್ಮಹತ್ಯೆ

Published:
Updated:

ಕಾರವಾರ: ಭಾರತೀಯ ನೌಕಾಪಡೆ ಅಧಿಕಾರಿಯೊಬ್ಬರು ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.ಲೆಫ್ಟಿನೆಂಟ್ ಫ್ರಾನ್ಸಿಸ್ ಎಸ್. ಡಿ'ಕೋಸ್ಟ (39) ಆತ್ಮಹತ್ಯೆ ಮಾಡಿಕೊಂಡವರು. ಅವರು ನೌಕಾನೆಲೆಯ ಕ್ವಾರ್ಟರ್ಸ್‌ನಲ್ಲಿ ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. 20 ದಿನಗಳ ಹಿಂದೆಯಷ್ಟೇ ತಮಿಳುನಾಡಿನ ನಾಗಪಟ್ಟಣಂನಿಂದ  ಇಲ್ಲಿಗೆ ವರ್ಗವಾಗಿ ಬಂದಿದ್ದರು. ಸಾವಿಗೆ ಮುನ್ನ ಅವರು ಬರೆದಿರುವ ಚೀಟಿಯಲ್ಲಿ ಜುಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.ಕಾರವಾರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry