ನ್ಯಾ.ಗೋವಿಂದರಾಜುಲು ಅಂತ್ಯಕ್ರಿಯೆ

7

ನ್ಯಾ.ಗೋವಿಂದರಾಜುಲು ಅಂತ್ಯಕ್ರಿಯೆ

Published:
Updated:
ನ್ಯಾ.ಗೋವಿಂದರಾಜುಲು ಅಂತ್ಯಕ್ರಿಯೆ

ಬಳ್ಳಾರಿ: ಆಂಧ್ರಪ್ರದೇಶದ ಅನಂತಪುರ ಬಳಿ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾದ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಕೆ.ಗೋವಿಂದರಾಜುಲು ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಭಾನುವಾರ ಸಂಜೆ ನೆರವೇರಿತು.ಬೆಂಗಳೂರಿನಿಂದ ಮಧ್ಯಾಹ್ನ 3.30ಕ್ಕೆ ನಗರಕ್ಕೆ ಆಗಮಿಸಿದ ಗೋವಿಂದರಾಜುಲು ಅವರ ಪಾರ್ಥಿವ ಶರೀರವನ್ನು ತೇರು ಬೀದಿಯಲ್ಲಿರುವ ಅವರ ನಿವಾಸದ ಎದುರು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.ನಂತರ ನ್ಯಾ. ಕೆ.ಗೋವಿಂದರಾಜುಲು ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ರುದ್ರಭೂಮಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಶಸ್ತ್ರ ಪಡೆಯ ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸುವ ಮೂಲಕ ಗೌರವ ಅರ್ಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry