ನ್ಯಾಟೊ ಪಡೆ ದಾಳಿಗೆ ಆರು ಮಕ್ಕಳು ಬಲಿ

7

ನ್ಯಾಟೊ ಪಡೆ ದಾಳಿಗೆ ಆರು ಮಕ್ಕಳು ಬಲಿ

Published:
Updated:

ಕಾಬೂಲ್ (ಎಎಫ್‌ಪಿ): ಆಫ್ಘಾನಿಸ್ತಾನದಲ್ಲಿ ನ್ಯಾಟೊ ಪಡೆ ತಾಲಿಬಾನೀಯರನ್ನು ಗುರಿಯಾಗಿಟ್ಟುಕೊಂಡು ಭಾನುವಾರ ಮನೆಯೊಂದರ ಮೇಲೆ ನಡೆಸಿದ ವಾಯು ದಾಳಿಗೆ, ಆರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 8 ಜನ ಬಲಿಯಾಗಿದ್ದಾರೆ.`ಇಲ್ಲಿನ ಪಕ್ತಿಯಾ ಪ್ರಾಂತ್ಯದಲ್ಲಿ ನ್ಯಾಟೊ ಪಡೆ ಶನಿವಾರ ರಾತ್ರಿ ಮನೆಯ ಮೇಲೆ ನಡೆಸಿದ ದಾಳಿಯಲ್ಲಿ ಮನೆಯ ಒಡೆಯ, ಪತ್ನಿ ಸೇರಿದಂತೆ ಆರು ಮಕ್ಕಳು ಸಾವನ್ನಪ್ಪಿದರು. ಮೃತ ವ್ಯಕ್ತಿ ತಾಲಿಬಾನ್ ಅಥವಾ ಯಾವುದೇ ಉಗ್ರಗಾಮಿ ಸಂಘಟನೆಗೆ ಸೇರಿದವನಲ್ಲ~ ಎಂದು ಸರ್ಕಾರದ ವಕ್ತಾರ ರೊವುಲ್ಲಾ ಸಮೂನ್ ತಿಳಿಸಿದ್ದಾರೆ.ನ್ಯಾಟೊ ಪಡೆಯ ಲೆಪ್ಟಿನೆಂಟ್ ಕರ್ನಲ್ ಜಿಮ್ಮಿ ಕುಮಿಂಗ್ಸ್ ಅವರು `ದಾಳಿ ಕುರಿತು ತನಿಖೆ ನಡೆಸಲಾಗುತ್ತಿದೆ~ ಎಂದು ಪ್ರತಿಕ್ರಿಯಿಸಿದ್ದಾರೆ. ಘಟನೆ ಸಂಬಂಧ ಅಮೆರಿಕದ ರಾಯಭಾರಿ ಮತ್ತು ನ್ಯಾಟೊ ಕಮಾಂಡರ್‌ಗೆ ಅಧ್ಯಕ್ಷ ಹಮೀದ್ ಕರ್ಜೈ ಪತ್ರ ಬರೆದಿದ್ದಾರೆ.ಹಲವು ವರ್ಷಗಳಿಂದ ಉಗ್ರರ ಹೆಸರಿನಲ್ಲಿ ಅಮಾಯಕ ನಾಗರಿಕರು ನ್ಯಾಟೊ ದಾಳಿಗೆ ಬಲಿಯಾಗುತ್ತಿರುವ ಬಗ್ಗೆ ದೂರುಗಳು ಸಾಮಾನ್ಯವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry