ಬುಧವಾರ, ಜುಲೈ 28, 2021
24 °C

ನ್ಯಾಯಕ್ಕಾಗಿ ಸವಿತಾ ಪೋಷಕರ ಪರಿತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): `ನಮ್ಮ ಪುತ್ರಿಯ ಸಾವಿನ ಹೊಣೆಯನ್ನು ಯಾರೊಬ್ಬರೂ ಈವರೆಗೆ ಹೊತ್ತುಕೊಂಡಿಲ್ಲ. ಆದ್ದರಿಂದ ನ್ಯಾಯಕ್ಕಾಗಿ ಪರಿತಪಿಸುವಂತಾಗಿದೆ' ಎಂದು ಬೆಳಗಾವಿಯ ದಂತ ವೈದ್ಯೆ ಸವಿತಾ ಹಾಲಪ್ಪನವರ ಅವರ ಪೋಷಕರು ಅಳಲು ತೋಡಿಕೊಂಡಿದ್ದಾರೆ.ಸವಿತಾ ಸಾವಿನ ಕುರಿತು ಇತ್ತೀಚೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿ ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಸವಿತಾ ಅವರ ಪೋಷಕರಾದ ಅಂದಾನಪ್ಪ ಯಾಳಗಿ ಮತ್ತು ಅಕ್ಕಮಹಾದೇವಿ ಆರೋಪಿಸಿದ್ದಾರೆ.`ಸವಿತಾ ಸಾವಿನ ಕುರಿತ ವರದಿಗಳನ್ನು ಪತ್ರಿಕೆಗಳಲ್ಲಿ ನೋಡಿದ್ದೇವೆ. ಅದು ಕೇವಲ ವೈದ್ಯಕೀಯ ವರದಿಯಾಗಿದೆಯೇ ಹೊರತು ಘಟನೆ ಸಂಬಂಧ ಯಾರನ್ನೂ ಹೊಣೆ ಮಾಡಿಲ್ಲ' ಎಂದು ಬೆಳಗಾವಿಯಲ್ಲಿರುವ ಅಂದಾನಪ್ಪ ಯಾಳಗಿ ಅವರು `ಐರಿಷ್ ಟೈಮ್ಸ'ಗೆ ತಿಳಿಸಿದ್ದಾರೆ.ತೀವ್ರ ನಂಜಿನ ಸಮಸ್ಯೆಯಿಂದ ಬಳಲುತ್ತಿದ್ದ ಸವಿತಾ ಅವರಿಗೆ ಗರ್ಭಪಾತ ಮಾಡಲು ಐರ‌್ಲೆಂಡ್‌ನ ಗಾಲ್‌ವೇ ವಿಶ್ವವಿದ್ಯಾಲಯ ಆಸ್ಪತ್ರೆ ನಿರಾಕರಿಸಿತ್ತು. ಇದರಿಂದ 31 ವರ್ಷದ ಸವಿತಾ ಕಳೆದ ವರ್ಷದ ಅಕ್ಟೋಬರ್ 28ರಂದು ಸಾವನ್ನಪ್ಪಿದ್ದರು. ಐರ‌್ಲೆಂಡ್ ಕ್ಯಾಥೊಲಿಕ್ ರಾಷ್ಟ್ರವಾಗಿರುವುದರಿಂದ ಗರ್ಭಪಾತದ ಮೇಲೆ ನಿಷೇಧ ಹೇರಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.