ಬುಧವಾರ, ಜೂನ್ 23, 2021
21 °C

ನ್ಯಾಯಮೂರ್ತಿ ಅಸಮಾಧಾನ: ಸರ್ಕಾರ ಕೆಲಸ ನಿರ್ವಹಿಸುತ್ತಿದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿವಿಲ್ ಕೋರ್ಟ್‌ನಲ್ಲಿ ತಮ್ಮ ಸೂಚನೆ ಹೊರತಾಗಿಯೂ ಪೊಲೀಸರು ಲಾಠಿ ಪ್ರಹಾರ ಮುಂದುವರಿಸಿರುವುದಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ವಿಷಯ ತಿಳಿಯುತ್ತಿದ್ದಂತೆ ನಾನು ಸ್ಥಳಕ್ಕೆ ಧಾವಿಸಿದೆ. ಅಲ್ಲಿ ಅಷ್ಟೊಂದು ಪ್ರಮಾಣದ ಪೊಲೀಸರನ್ನು ನೋಡಿ, ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಡಿಜಿಪಿ ಅವರಿಗೆ ಸೂಚಿಸಿದೆ. ಅಷ್ಟೇ ಅಲ್ಲದೇ ಗೃಹ ಸಚಿವರು ಹಾಗೂ ನಗರ ಪೊಲೀಸ್ ಕಮಿಷನರ್ ಅವರಿಗೂ ಹೇಳಿದೆ. ನಾನೇ ಖುದ್ದಾಗಿ ಪರಿಸ್ಥಿತಿ ತಿಳಿಮಾಡುವುದಾಗಿ ವಿವರಿಸಿದೆ.ಆದರೆ ಅವರು ಮಾತು ಕೇಳಲಿಲ್ಲ. ಪೊಲೀಸರು ಲಾಠಿ ಪ್ರಹಾರ ಮುಂದುವರಿಸಿದರು~ ಎಂದು ಅವರು ತಿಳಿಸಿದರು.

ಘಟನೆ ಕುರಿತಾಗಿ ಹೈಕೋರ್ಟ್‌ನಲ್ಲಿ ಇರುವ ಬೆಂಗಳೂರು ವಕೀಲರ ಸಂಘದಲ್ಲಿ ವಕೀಲರನ್ನು ಉದ್ದೇಶಿಸಿ ಅವರು ಮಾತನಾಡಿದರು.ಕೋರ್ಟ್‌ಗೆ ಭೇಟಿ ನೀಡಿದ್ದ ಗೃಹ ಸಚಿವ ಆರ್.ಅಶೋಕ ಅವರ ಗಮನಕ್ಕೆ ಈ ವಿಷಯ ತಂದಿರುವುದಾಗಿ ಅವರು ವಿವರಿಸಿದರು.`ರಾಜ್ಯದಲ್ಲಿ ಸರ್ಕಾರ ಎನ್ನುವುದು ಇದೆಯೇ, ಇದ್ದರೆ ಅದು ಯಾರನ್ನು ರಕ್ಷಣೆ ಮಾಡುತ್ತಿದೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವವರು ಯಾರು ಎಂಬುದಾಗಿ ಕೂಡ ನಾನು ಅವರಿಗೆ ಪ್ರಶ್ನಿಸಿದ್ದೇನೆ~ ಎಂದು ತಿಳಿಸಿದರು.ಸ್ಥಳಕ್ಕೆ ಭೇಟಿ ನೀಡಿದ್ದ ಇನ್ನೊಬ್ಬ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಮಾತನಾಡಿ, `ಹಿಂಸೆಯನ್ನು ಹಿಂಸೆಯಿಂದ ಜಯಿಸಲು ಸಾಧ್ಯವಿಲ್ಲ. ವಕೀಲರು ತಾಳ್ಮೆಯಿಂದ ವರ್ತಿಸಬೇಕು~ ಎಂದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.