ನ್ಯಾಯಮೂರ್ತಿ ಹೇಳಿಕೆಗೆ ವಕೀಲರ ಸಂಘದ ಆಕ್ಷೇಪ

7

ನ್ಯಾಯಮೂರ್ತಿ ಹೇಳಿಕೆಗೆ ವಕೀಲರ ಸಂಘದ ಆಕ್ಷೇಪ

Published:
Updated:

ಬೆಂಗಳೂರು: `ನ್ಯಾಯಮೂರ್ತಿ ಬಿ.ವಿ. ಪಿಂಟೋ ಅವರು ಮೈಸೂರಿನಲ್ಲಿ ವಕೀಲ ಸಮುದಾಯದ ಕುರಿತು ಆಡಿತ ಮಾತುಗಳು ಆಘಾತ ಉಂಟುಮಾಡಿವೆ' ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ಹೇಳಿದ್ದಾರೆ.`ಬೆಂಗಳೂರಿನ ಬಹುತೇಕ ವಕೀಲರು ವೇಶ್ಯಾವಾಟಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ನ್ಯಾಯಮೂರ್ತಿ ಬಿ.ವಿ. ಪಿಂಟೋ ಅವರು ಮೈಸೂರಿನಲ್ಲಿ ಹೇಳಿಕೆ ನೀಡಿರುವುದನ್ನು ಸಂಘ ಖಂಡಿಸುತ್ತದೆ' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.`ನ್ಯಾಯಮೂರ್ತಿಯವರ ಮಾತು ವಕೀಲ ಸಮುದಾಯದ ಪ್ರತಿಷ್ಠೆಗೆ ಧಕ್ಕೆ ತಂದಿದೆ. ಅವರು ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ. ಮಂಗಳವಾರ ನಡೆಯಲಿರುವ ಸಂಘದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು' ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry