ಗುರುವಾರ , ಏಪ್ರಿಲ್ 15, 2021
21 °C

`ನ್ಯಾಯಲಯ'ವಾದ ನ್ಯಾಯಾಲಯ ಸಂಕೀರ್ಣ

.ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನ್ಯಾಯಲಯ'ವಾದ ನ್ಯಾಯಾಲಯ ಸಂಕೀರ್ಣ

ಕುಷ್ಟಗಿ: ಪಟ್ಟಣದಲ್ಲಿ ಕಿರಿಯ ಮತ್ತು ಹಿರಿಯಶ್ರೇಣಿ ನ್ಯಾಯಾಲಯ ಸಂಕೀರ್ಣಗಳನ್ನೊಳಗೊಂಡ ಕಟ್ಟಡ ಹೊಸದಾಗಿ ನಿರ್ಮಾಣಗೊಂಡಿದೆ. ಆದರೆ ಅದರ ಮುಖ್ಯ ಪ್ರವೇಶದ್ವಾರಕ್ಕೆ ಬರೆದಿರುವ ಹೆಸರು ಸಾರ್ವಜನಿಕ ಚರ್ಚೆಗೆ ಗ್ರಾಸ ಒದಗಿಸಿದೆ.ನ್ಯಾಯಾಲಯ ಎಂದು ಬರೆಯಬೇಕಾದಲ್ಲಿ `ನಾಯಲಯ' ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಮುಖ್ಯರಸ್ತೆಯಲ್ಲೇ ಈ ಸಂಕೀರ್ಣ ಇರುವುದರಿಂದ ತಪ್ಪಾಗಿ ಬರೆದಿರುವ `ನಾಯಲಯ' ದಾರಿಹೋಕರ ಗಮನಸೆಳೆಯುತ್ತಿದ್ದು ಜಿಜ್ಞಾಸೆಗೆ ಕಾರಣವಾಗಿದೆ.ದೇವಾಲಯ ಎಂದರೆ ದೇವರು ಇರುವ ಆಲಯ ಎಂಬ ಅರ್ಥ ಸೂಚಿಸಿದರೆ ನ್ಯಾಯಾಲಯ ಅದೇ ರೀತಿ, ಅಂದರೆ ನ್ಯಾಯ ನೀಡುವ ಸ್ಥಳ `ನ್ಯಾಯದ-ಆಲಯ' ಎಂದೆ ಅರ್ಥೈಸಲಾಗುತ್ತಿದೆ. ನ್ಯಾಯದಾನ ದೊರೆಯುವ ಪವಿತ್ರಸ್ಥಳ ದೇವಮಂದಿರಕ್ಕೆ ಸಮನಾದುದು ಎಂಬ ಭಾವ ಅದರಲ್ಲಿರುತ್ತದೆ ಎಂದು ಕೆಲವರು `ಪ್ರಜಾವಾಣಿ'ಗೆ ವಿವರಿಸಿದರು.`ನ್ಯಾಯ ಲಯ' ಎಂದರೆ ನ್ಯಾಯ ಕಳೆದುಕೊಳ್ಳುವುದು ಎಂಬಂತಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ. ದೊಡ್ಡ ದೊಡ್ಡ ಅಕ್ಷರಗಳಲ್ಲಿ ಈ ರೀತಿ ತಪ್ಪು ಬರೆದಿರುವುದು ಗೋಚರಿಸುತ್ತಿದ್ದರೂ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆ ಗಮನಕ್ಕೆ ಮಾತ್ರ ಇದು ಬಂದಂತಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.